ಮಂಗಳೂರು: ನದಿಯಲ್ಲಿ ದಂಪತಿ ಮೃತದೇಹ ತೇಲುತ್ತಿರುವ ಕಿರುಚಿತ್ರವೊಂದರ ಚಿತ್ರೀಕರಣದ ವೀಡಿಯೊ ತಿರುಚಿ 'ನೇತ್ರಾವತಿ ನದಿಯಲ್ಲಿ ದಂಪತಿ ಮೃತದೇಹ ಪತ್ತೆ' ಎಂಬುದಾಗಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ!
ಈ ಕಿಡಿಗೇಡಿತನದಿಂದಾಗಿ ಜನರು ಆತಂಕಕ್ಕೊಳಗಾಗಬೇಕಾದ ಪರಿಸ್ಥಿತಿಯೂ ಉದ್ಭವಿಸಿತು. ನಗರದ ಅಡ್ಯಾರ್ ಬಳಿಯಿರುವ ನೇತ್ರಾವತಿ ನದಿ ತೀರದಲ್ಲಿ ಕಿರುಚಿತ್ರದ ಚಿತ್ರೀಕರಣ ನಡೆಯುತ್ತಿತ್ತು.
ಇದರಲ್ಲಿ ದಂಪತಿ ಒಟ್ಟಿಗೆ ಬಟ್ಟೆಯಿಂದ ಕಟ್ಟಿಕೊಂಡು ಮೃತಪಟ್ಟಿರುವ ದೃಶ್ಯವನ್ನು ಚಿತ್ರೀಕರಣ ಮಾಡಲಾಗಿತ್ತು. ಈ ವೀಡಿಯೊದಲ್ಲಿ ದಂಪತಿ ಮೃತದೇಹ ನದಿಯಲ್ಲಿ ತೇಲುವ ದೃಶ್ಯವಿದೆ. ಈ 17 ಸೆಕೆಂಡುಗಳ ವೀಡಿಯೊವನ್ನು ತಿರುಚಿ 'ನೇತ್ರಾವತಿ ನದಿಯಲ್ಲಿ ದಂಪತಿ ಮೃತದೇಹ ಪತ್ತೆ' ಎಂದು ಸುದ್ದಿ ಹಬ್ಬಿಸಲಾಗಿದೆ.
ಈ ವೀಡಿಯೊ ಎಲ್ಲೆಡೆ ವೈರಲ್ ಆಗಿದ್ದು, ವಿದೇಶದಲ್ಲಿರುವ ಕರಾವಳಿಗರ ಸಹಿತ ಹಲವು ಮಂದಿ ಇದರಿಂದ ಆತಂಕಿತರಾಗಿ ತಮ್ಮ ಪರಿಚಯದವರಿಗೆ ಕರೆ ಮಾಡಿ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆದರೆ, ವಾಸ್ತವದಲ್ಲಿ ವೀಡಿಯೊದಲ್ಲಿ ಕ್ಯಾಮೆರಾ ಸೇರಿದಂತೆ, ಚಿತ್ರೀಕರಣ ನಡೆಸುವ ವೀಡಿಯೊ ಕೂಡ ಇದರ ಜೊತೆಗಿದ್ದು, ಕೇವಲ ಮೃತದೇಹ ತೇಲುತ್ತಿರುವ ವೀಡಿಯೊ ಮಾತ್ರ ಹರಿಯಬಿಟ್ಟು ಆತಂಕ ಸೃಷ್ಟಿಸುವಂತೆ ಮಾಡಲಾಗಿದೆ.
Kshetra Samachara
30/01/2021 09:41 pm