ಉಡುಪಿ: ಶಿವಮೊಗ್ಗ ಓಪನ್ ಮೂರನೇ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿ 2022 ರ ಸ್ಪರ್ಧೆಯಲ್ಲಿ ಉಡುಪಿಯ ಒಳಕಾಡು ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ರಿಯಾ ಶೆಟ್ಟಿ ಕಟ ವಿಭಾಗದಲ್ಲಿ ಚಿನ್ನ ಮತ್ತು ಕುಮಿಟಿ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾಳೆ. ಈಕೆ ಉಡುಪಿ ಹಾವಂಜೆ ಗ್ರಾಮದ ಕೀಳಂಜೆಯ ಛಾಯಾಗ್ರಾಹಕ ಗಣೇಶ್ ಶೆಟ್ಟಿ ಮತ್ತು ಜಯಲಕ್ಷ್ಮೀ ಶೆಟ್ಟಿ ದಂಪತಿ ಪುತ್ರಿಯಾಗಿದ್ದಾಳೆ.
ರಿಯಾ ಶೆಟ್ಟಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಪರ್ಕಳದ ಪ್ರವೀಣ್ ಪಿ.ಕೆ.ಸಿ ಯವರ ಶಿಷ್ಯೆಯಾಗಿದ್ದು, ಉಡುಪಿ ಒಳಕಾಡು ಶಾಲೆಯಲ್ಲಿ ಪ್ರತಿಭಾವಂತೆ ವಿದ್ಯಾರ್ಥಿನಿಯಾಗಿದ್ದಾಳೆ.
PublicNext
23/08/2022 12:36 pm