ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಏಶ್ಯನ್ ಪವರ್ ಲಿಫ್ಟಿಂಗ್; ಮಂಗಳೂರಿನ ಪ್ರದೀಪ್ ಕುಮಾರ್ ಗೆ ಗೋಲ್ಡ್

ಮಂಗಳೂರು: ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದ ಏಶ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ -2022ರಲ್ಲಿ ಮಂಗಳೂರಿನ ಪ್ರದೀಪ್ ಕುಮಾರ್ ಆಚಾರ್ಯ ಚಿನ್ನದ ಪದಕ ಗಳಿಸಿದ್ದಾರೆ.

ಈ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಪ್ರದೀಪ್ ಕುಮಾರ್ 83 ಕೆಜಿ ಸೀನಿಯರ್ ವಿಭಾಗದಲ್ಲಿ ಭಾಗವಹಿಸಿದ್ದಾರೆ. ಸ್ಕ್ವಾಚ್ 300 ಕೆಜಿ, ಬೆಂಚ್ ಪ್ರೆಸ್ 207.5 ಕೆಜಿ, ಡೆಡ್ ಲಿಫ್ಟ್ 275 ಕೆಜಿ ಸೇರಿದಂತೆ ಒಟ್ಟು 787 ಕೆಜಿ ಭಾರವನ್ನು ಎತ್ತಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಕೋಲ್ಕೊತ್ತಾದ ಅಂಶ್ ಸಿಂಗ್ ದ್ವಿತೀಯ ಹಾಗೂ ಕಜಕಿಸ್ತಾನದ ಕಾಪ್ಶೆ ಅಮನ್ ತೃತೀಯ ಸ್ಥಾನ ಗಳಿಸಿದ್ದಾರೆ.

ಮಂಗಳೂರಿನ ಶ್ರೀ ಬಾಲಾಂಜನೇಯ ಜಿಮ್ನೇಶಿಯಂ ಸದಸ್ಯ ಪ್ರದೀಪ್, ಕೋಚ್ ಸತೀಶ್ ಕುಮಾರ್ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಡಿಸೆಂಬರ್ ನಲ್ಲಿ ನ್ಯೂಜಿಲ್ಯಾಂಡ್ ನಲ್ಲಿ ನಡೆಯುವ ಕಾಮನ್ ವೆಲ್ತ್ ಪವರ್‌ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಸ್ಪರ್ಧಿಸಲು ಅರ್ಹತೆ ಗಳಿಸಿದ್ದಾರೆ.

Edited By : Shivu K
Kshetra Samachara

Kshetra Samachara

20/06/2022 01:17 pm

Cinque Terre

4.56 K

Cinque Terre

1

ಸಂಬಂಧಿತ ಸುದ್ದಿ