ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಜೂನ್ 24 ರಿಂದ ಮೂರು ದಿನಗಳ ರಾಜ್ಯಮಟ್ಟದ ಚೆಸ್ ಪಂದ್ಯಾಕೂಟ

ಪುತ್ತೂರು: ಮೂರು ದಿನಗಳ ರಾಜ್ಯಮಟ್ಟದ 17 ವರ್ಷದೊಳಗಿನ ಚೆಸ್ ಚಾಂಪಿಯನ್ ಶಿಪ್ ಜೂನ್ 24, 25 ಮತ್ತು 26 ರಂದು ಪುತ್ತೂರಿನಲ್ಲಿ ನಡೆಯಲಿದೆ ಎಂದು ಪುತ್ತೂರು ತಾಲೂಕು ಚೆಸ್ ಅಸೋಸಿಯೇಷನ್ ಅಧ್ಯಕ್ಷೆ ಉಮಾ.ಡಿ.ಪ್ರಸನ್ನ ಹೇಳಿದರು.

ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಪುತ್ತೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯಮಟ್ಟದ ಚೆಸ್ ಚಾಂಪಿಯನ್ ಶಿಪ್ ಆಯೋಜಿಸಲಾಗುತ್ತಿದೆ ಎಂದರು. ಈ ಸ್ಪರ್ಧಾಕೂಟವು ಅಂತರಾಷ್ಟ್ರೀಯ ಚೆಸ್ ಫೆಡರೇಶನ್ ನಿಯಮದಂತೆ, ಅಂತರಾಷ್ಟ್ರೀಯ ಚೆಸ್ ನಿರ್ಣಾಯಕರ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದರು.

ಪಂದ್ಯಾಟದಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ 750 ರೂಪಾಯಿಗಳ ಎಂಟ್ರಿ ಫೀಸ್ ಕೂಡ ನಿಗಧಿಪಡಿಸಲಾಗಿದೆ. ಪಂದ್ಯಾಕೂಟವು ಪುತ್ತೂರಿನ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿದ್ದು, ಸುಮಾರು 200 ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ಮಾಹಿತಿ ನೀಡಿದರು.

Edited By : Nagesh Gaonkar
PublicNext

PublicNext

15/06/2022 12:46 pm

Cinque Terre

44.43 K

Cinque Terre

0

ಸಂಬಂಧಿತ ಸುದ್ದಿ