ಮುಲ್ಕಿ: ಶ್ರೀ ಕೋರ್ದಬ್ಬು ಕಲ ಮುಂಡಾಲ ವೇದಿಕೆ ವತಿಯಿಂದ ದ್ವಿತೀಯ ವರ್ಷದ ಮುಂಡಾಲ ಮಾನ್ಸೂನ್ ಟ್ರೋಫಿ 2022 ಕ್ರಿಕೆಟ್ ಪಂದ್ಯಾಟದ ಸಮಾರೋಪ ಕಾರ್ನಾಡ್ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಮುಂಡಾಲ ವೇದಿಕೆ ಅಧ್ಯಕ್ಷ ಕಮಲಾಕ್ಷ ಕಕ್ವ ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯಅತಿಥಿಗಳಾಗಿ ನಿವೃತ್ತ ಶಿಕ್ಷಕ ಶಂಕರ್ ಮಾಸ್ತರ್ ಗೋಳಿಜೊರ,ಉದ್ಯಮಿ ಹರೀಶ್ ಜೆ ಕೊಲಕಾಡಿ, ಸಾಮಾಜಿಕ ಕಾರ್ಯಕರ್ತ ಸೀತಾರಾಮ್ ಸಾಲ್ಯಾನ್ ತೋಕೂರು, ಧರ್ಮಾನಂದ ಶೆಟ್ಟಿಗಾರ್, ಸುರೇಶ್ ಕೊಲಕಾಡಿ, ವಿಶ್ವನಾಥ ಕಕ್ವ,ಶಿವರಾಮ್ ಮೆಸ್ಕಾಂ, ಶಯನ್ ಕುಮಾರ್ ಲಿಂಗಪ್ಪಯ್ಶಕಾಡು, ಸುಧಾಕರ ಗೇರುಕಟ್ಟೆ, ರವೀಂದ್ರ ಕೆರೆಕಾಡು ಮತ್ತಿತರರು ಉಪಸ್ಥಿತರಿದ್ದರು.
ಶಾಸಕ ಉಮಾನಾಥ ಕೋಟ್ಯಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ,ಮತ್ತಿತರರು ಭೇಟಿ ನೀಡಿ ಶುಭ ಹಾರೈಸಿದರು.
ಟೂರ್ನಮೆಂಟಿನ ರೋಮಾಂಚಕಾರಿ ಅಂತಿಮ ಪಂದ್ಯದಲ್ಲಿ ಸೋಲಿಸಿ ಫ್ರೆಂಡ್ಸ್ ಮುಲ್ಕಿ ತಂಡವು ಓಂಕಾರೇಶ್ವರ ಪುತ್ತೂರು ತಂಡವನ್ನು ಸೋಲಿಸಿ "ಮುಂಡಾಲ ಮಾನ್ಸೂನ್ ಟ್ರೋಫಿ- 2022" ಹಾಗೂ ನಗದು ಪಡೆಯಿತು. ದ್ವಿತೀಯ ಸ್ಥಾನಿಯಾಗಿ ಓಂಕಾರೇಶ್ವರ ಪುತ್ತೂರು ತಂಡವು ಪ್ರಶಸ್ತಿ ಗಳಿಸಿತು
ಟೂರ್ನಮೆಂಟಿನ ಪಂದ್ಯಶ್ರೇಷ್ಠ ನಾಗಿ, ಸರಣಿಶ್ರೇಷ್ಠ ನಾಗಿ, ಫ್ರೆಂಡ್ಸ್ ಮುಲ್ಕಿ ತಂಡದ ಸುದರ್ಶನ್, ಉತ್ತಮ ದಾಂಡಿಗನಾಗಿ ಫ್ರೆಂಡ್ಸ್ ಮುಲ್ಕಿ ತಂಡದ ಪ್ರವೀಣ,ಉತ್ತಮ ಎಸೆತಗಾರ, ಕ್ಷೇತ್ರ ರಕ್ಷಕರಾಗಿ ಓಂಕಾರೇಶ್ವರ ತಂಡದ ಶರತ್, ಅಶೋಕ್ ಪ್ರಶಸ್ತಿ ಸ್ವೀಕರಿಸಿದರು.
ವೇದಿಕೆಯಲ್ಲಿ ಸಾಧಕರ ನೆಲೆಯಲ್ಲಿ ನೀಲಪ್ಪ ಶೇರಿಗಾರ್, ಕರಾಟೆ ಪಟು ಪ್ರಕಾಶ್ ಕೊಯ್ಯಾರು, ಸಮಾಜ ಸೇವಕರಾದ ಮಹೇಶ ಅಮೀನ್, ರವಿ ಪಂಪ್ವೆಲ್, ಶಿವರಾಮ್ ಮೆಸ್ಕಾಂ, ಸುರೇಶ್ ಕೊಲಕಾಡಿ ರವರನ್ನು ಗೌರವಿಸಲಾಯಿತು.
Kshetra Samachara
29/05/2022 08:53 pm