ಮಂಗಳೂರು: ಕಜಕಿಸ್ತಾನದಲ್ಲಿ ನಡೆದಿರುವ ವಿಶ್ವ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಮಂಗಳೂರಿನ ಯುವತಿಯೋರ್ವಳು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮಂಗಳೂರಿನ ಹೊರವಲಯದಲ್ಲಿರುವ ಏಳಿಂಜಿ ನಿವಾಸಿ ಸಿಯಾ ಶೆಟ್ಟಿಯವರು ವಿಶ್ವ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಸಿಯಾ ಶೆಟ್ಟಿಯವರು ಕಿನ್ನಿಗೋಳಿಯ ವೀರ ಮಾರುತಿ ವ್ಯಾಯಾಮ ಶಾಲೆಯ ವಿದ್ಯಾರ್ಥಿನಿ. ಇವರು ಮಂಗಳೂರಿನ ಈಶ್ವರ್ ಕಟೀಲು ಹಾಗೂ ವಿಜಯ ಕಾಂಚನ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
Kshetra Samachara
27/05/2022 08:12 am