ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಖಜಕಿಸ್ತಾನದಲ್ಲಿ ಕಾರ್ಕಳದ ಅಕ್ಷತಾ ಬೆಳ್ಳಿ 'ಪವರ್'

ಕಾರ್ಕಳ: ಖಜಕಿಸ್ತಾನದಲ್ಲಿ ನಡೆದ ವಿಶ್ವ ಪವರ್ ಲಿಪ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಬೆಳ್ಳಿಯ ಪದಕ ಲಭಿಸಿದೆ. ಬೆಂಚ್ ಪ್ರೆಸ್ ವಿಭಾಗದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ ಕಾರ್ಕಳ ತಾಲೂಕಿನ ಬೋಳ ಗ್ರಾಮದ ಅಕ್ಷತಾ ಪೂಜಾರಿ ಬೆಳ್ಳಿ ಪದಕ ಪಡೆದಿದ್ದಾರೆ.

ಅಕ್ಷತಾ ಪೂಜಾರಿ ಪವರ್ ಲಿಫ್ಟಿಂಗ್‌ನಲ್ಲಿ ಈಗಾಗಲೇ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹತ್ತಾರು ಪದಕಗಳನ್ನು ಬಾಚಿಕೊಂಡಿದ್ದಾರೆ. 2014ನೇ ಸಾಲಿನ ಏಕಲವ್ಯ ಪ್ರಶಸ್ತಿ ಕೂಡ ಅಕ್ಷತಾ ಪೂಜಾರಿಗೆ ಒಲಿದಿತ್ತು. ಇದೀಗ ಪವರ್ ಲಿಫ್ಟಿಂಗ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳ್ಳಿಯ ಪದಕ ಲಭಿಸಿರುವುದು ದೇಶ ಹೆಮ್ಮೆ ಪಡುವ ವಿಚಾರ.

Edited By :
Kshetra Samachara

Kshetra Samachara

24/05/2022 07:01 pm

Cinque Terre

27.82 K

Cinque Terre

3

ಸಂಬಂಧಿತ ಸುದ್ದಿ