ಸುರತ್ಕಲ್: ದಕ್ಷಿಣ ಕನ್ನಡ ವುಶೂ ಅಸೋಸಿಯೇಷನ್ ಮತ್ತು ಇನ್ ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಮಾರ್ಷಲ್ ಆರ್ಟ್ಸ್ ಸಹಭಾಗಿತ್ವದಲ್ಲಿ ರಾಷ್ಟ್ರ ಮಟ್ಟದ ವುಶೂ ಮತ್ತು ಕಿಕ್ ಬಾಕ್ಸಿಂಗ್ ಪದಕ ವಿಜೇತ ಕ್ರೀಡಾಪಟುಗಳಿಗೆ ಸಾರ್ವಜನಿಕ ಅಭಿನಂದನೆ ಸುರತ್ಕಲ್ ನ ಕರ್ನಾಟಕ ಸೇವಾ ವೃಂದ ವೇದಿಕೆಯಲ್ಲಿ ನಡೆಯಿತು.
ಸಂಸ್ಥೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ವುಶೂ ಕ್ರೀಡೆಗೆ ಕೇಂದ್ರ ಸರಕಾರ ಸಹಿತ ನಾನಾ ರಾಜ್ಯ ಸರಕಾರಗಳು ಆರ್ಥಿಕ ಸಹಾಯ ನೀಡುತ್ತಿದ್ದು, ಇನ್ನಷ್ಟು ಮಂದಿ ಕ್ರೀಡಾಪಟುಗಳು ಬೆಳಕಿಗೆ ಬರಲು ಪೂರಕವಾಗಿದೆ ಎಂದರು.
ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಪದಕ ವಿಜೇತರಾದ ರಾಜೇಶ್, ಆದಿತ್ಯ ಕಿರಣ್, ಅತೀಶ್ ಶೆಟ್ಟಿ, ಪ್ರಜ್ಞಾ, ಜಾನ್ವಿ, ರಕ್ಷಿತ್, ಆದಿತ್ಯ, ವಿನೀತ್, ಹಸ್ಸ ಅವರನ್ನು ಅಭಿನಂದಿಸಲಾಯಿತು.ಕರಾಟೆ, ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿ ಚಿನ್ನದ ಪದಕ ಪಡೆದ ಅವಳಿ ಸೋದರಿಯರಾದ ಅವನಿ ಹಾಗೂ ಅಂಶಿ ಅವರನ್ನು ಸನ್ಮಾನಿಸಲಾಯಿತು.
ಕಿರಣ್, ಸಂಸ್ಥೆಯ ಹಿರಿಯ ತರಬೇತುದಾರ ನಿತಿನ್, ಪ್ರವೀಣ್ ಕುಮಾರ್, ಉದ್ಯಮಿ ಮಹಾಬಲ ಪೂಜಾರಿ ಕಡಂಬೋಡಿ, ಸಂಸ್ಥೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ಮರವೂರು ಗ್ರಾಪಂ ಅಧ್ಯಕ್ಷ ಗಣೇಶ್ ಅರ್ಬಿ ಉಪಸ್ಥಿತರಿದ್ದರು.
Kshetra Samachara
05/04/2022 07:15 am