ಉಡುಪಿ: ಮಾಂಡವಿ ಬಿಲ್ಡರ್ಸ್ ಹಾಗೂ ಇ ಫಿಟ್ನೆಸ್ ಜಿಮ್ ವತಿಯಿಂದ ಉಡುಪಿಯ ಮೌಂಟ್ ರೋಸರಿ ಚರ್ಚ್ ಗ್ರೌಂಡ್ ನಲ್ಲಿ ಆಯೋಜಿಸಲಾಗಿದ್ದ ಮಿಸ್ಟರ್ ಉಡುಪಿ ಹಾಗೂ ಮಿಸ್ಟರ್ ಕರ್ನಾಟಕ ಮಹಿಳಾ ವಿಭಾಗದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ನೂರಾರು ಮಹಿಳೆಯರು ಬಾಡಿ ಬಿಲ್ಡ್ ಪ್ರದರ್ಶಿಸಿದರು.. ಮಹಿಳೆಯರ ಸ್ಪರ್ಧೆಯಲ್ಲಿ ವಿಜೇತರಾದ ನೇಹಾ ಪ್ರಭಾಕರ್ ಅವರು ಮಾತನಾಡಿ ಬಹಳ ವರ್ಷಗಳ ಶ್ರಮದಿಂದ ಉಡುಪಿಯಲ್ಲಿ ನಡೆದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಬಂದಿದೆ. ಕೋಚ್ ಹರೀಶ್ ಕೃಷ್ಣಪ್ಪ ಹಾಗೂ ತಮ್ಮ ಕುಟುಂಬದ ಸದಸ್ಯರ ಪ್ರೋತ್ಸಾಹದಿಂದ ಇಂದು ಈ ಮಟ್ಟಕ್ಕೆ ಬೆಳೆದಿರುವುದಾಗಿ ತಿಳಿಸಿದರು..ಮುಂದಿನ ದಿನಗಳಲ್ಲಿ ಮಿಸೆಸ್ ಸೌತ್, ಮಿಸೆಸ್ ಇಂಡಿಯಾ ಹಾಗೂ ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ತಯಾರಿ ನಡೆಸುತ್ತಿರುವುದಾಗಿ ತಿಳಿಸಿದರು... ಪ್ರತಿ ದಿನ ಮಾಂಸ ಹಾಗೂ ಸಸ್ಯಹಾರಿ ತಿನ್ನುವ ಮೂಲಕ ದೇಹದ ಬೆಳವಣಿಗೆಗೆ ಶ್ರಮಿಸಲಾಗುತ್ತಿದೆ ಎಂದರು. ಹಾಗೇ ಪ್ರತಿಯೊಬ್ಬ ಮಹಿಳೆ ಸಾಧಿಸಬೇಕಾದರೆ ತಮ್ಮ ಕುಟುಂಬದ ಸಹಕಾರ ಆಗತ್ಯವಾಗಿದೆ ಎಂದರು.
PublicNext
15/03/2022 05:09 pm