ಬೈಂದೂರು: ಅಂಡಮಾನ್-ನಿಕೋಬಾರ್ ದ್ವೀಪದ ಪೋರ್ಟ್ ಬ್ಲೇರ್ ನಲ್ಲಿ ನಡೆದ 2021-2022 ನೇ ಸಾಲಿನ ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಧನ್ವಿ ಮರವಂತೆ ಪ್ರಥಮ ಸ್ಥಾನ ಗಳಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಈ ಬಗ್ಗೆ ಶಿವಮೊಗ್ಗದಲ್ಲಿ ಜ.27 ರಂದು ನಡೆದ ಕಾರ್ಯಕ್ರಮದಲ್ಲಿ ಧನ್ವಿಗೆ ಪ್ರಮಾಣಪತ್ರ ಮತ್ತು ಮೊದಲ ಸ್ಥಾನದ ಚಿನ್ನದ ಪದಕವನ್ನು ವರ್ಷಿಣಿ ಯೋಗ ಸಂಸ್ಥೆಯವರು ನೀಡಿದರು.
ಕಾರ್ಕಳದ ʼನಿರಂತರ ಯೋಗ ಕೇಂದ್ರʼ ದ ಯೋಗ ಶಿಕ್ಷಕ ಸುರೇಂದ್ರ ಕಾಮತ್ ಧನ್ವಿಗೆ ತರಬೇತಿ ನೀಡಿದ್ದಾರೆ. ಈಕೆ ಚಂದ್ರಶೇಖರ್-ಜ್ಯೋತಿ ದಂಪತಿ ಪುತ್ರಿ. ತ್ರಾಸಿ ಡಾನ್ ಬಾಸ್ಕೋ ಸ್ಕೂಲ್ ನ ಎಂಟನೇ ತರಗತಿಯಲ್ಲಿ ಓದುತ್ತಿದ್ದಾಳೆ.
Kshetra Samachara
29/01/2022 03:33 pm