ಮಂಗಳೂರು: ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆದ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕಗಳನ್ನು ಗೆದ್ದ ಮಂಗಳೂರಿನ ದೀಪಾ ಕೆ.ಎಸ್., ವೆನಿಝಿಯಾ ಕಾರ್ಲೊ, ದೀಪಿಕಾ ಜಯಪುತ್ರನ್ ಇಂದು ಮಂಗಳೂರು ಏರ್ ಪೋರ್ಟ್ ಗೆ ಬಂದಿಳಿದರು. ಈ ವೇಳೆ ಅವರನ್ನು ತರಬೇತುದಾರರು, ಮನೆಯವರು, ಅಭಿಮಾನಿಗಳು ಸ್ವಾಗತಿಸಿ, ಅಭಿನಂದಿಸಿದರು.
ಡಿ.24ರಿಂದ 31ರ ವರೆಗೆ ಇಸ್ತಾಂಬುಲ್‌ನಲ್ಲಿ ನಡೆದ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‌ನಲ್ಲಿ 14 ದೇಶಗಳ ಸ್ಪರ್ಧಾಳುಗಳು ಭಾಗವಹಿಸಿದ್ದರು. 76 ಕೆ.ಜಿ. ಮಾಸ್ಟರ್ಸ್ ಕ್ಲಾಸಿಕ್ ವಿಭಾಗದಲ್ಲಿ ದೀಪಾ ಕೆ.ಎಸ್. 6 ಚಿನ್ನದ ಪದಕ ಗೆದ್ದಿದ್ದಾರೆ.
ವೆನಿಝಿಯಾ ಕಾರ್ಲೋಸ್ ಜೂನಿಯರ್ ಇಕ್ವಿಪ್ ವಿಭಾಗದಲ್ಲಿ 4 ಚಿನ್ನ, ಕ್ಲಾಸಿಕ್ ವಿಭಾಗದಲ್ಲಿ 4 ಚಿನ್ನ, ಬೆಂಚ್ ಪ್ರೆಸ್‌ನಲ್ಲಿ 2 ಬೆಳ್ಳಿ ಪದಕ ಜಯಿಸಿದ್ದಾರೆ. ದೀಪಿಕಾ ಪುತ್ರನ್ ಕಿರಿಯರ ಇಕ್ವಿಕ್ ವಿಭಾಗದಲ್ಲಿ 4 ಬೆಳ್ಳಿ, ಕ್ಲಾಸಿಕ್ ವಿಭಾಗದಲ್ಲಿ 4 ಬೆಳ್ಳಿ, ಬೆಂಚ್ ಪ್ರೆಸ್‌ನಲ್ಲಿ 2 ಬೆಳ್ಳಿ ಪದಕ ಗೆದ್ದಿದ್ದಾರೆ.
ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಸತೀಶ್ ಕುದ್ರೋಳಿ, ಕೋಚ್ ಪ್ರದೀಪ್ ಆಚಾರ್ಯ, ವಿನ್ಸೆಂಟ್ ಕಾರ್ಲೋಸ್, ಕುಂಜತ್ತೋಡಿ ವಾಸುದೇವ ಭಟ್ ಕದ್ರಿ, ಪವರ್ ಲಿಫ್ಟರ್ ಗೀತಾ ಬಾಯಿ, ಪತ್ರಕರ್ತ ಜಿತೇಂದ್ರ ಕುಂದೇಶ್ವರ, ಕದ್ರಿ ಯಕ್ಷಕೂಟ ಸಂಚಾಲಕ ರಾಮಚಂದ್ರ ಭಟ್ ಎಲ್ಲೂರು ಉಪಸ್ಥಿತರಿದ್ದರು. ಕದ್ರಿ ದೇವಸ್ಥಾನ ಬಳಿ ಆವರಣದಲ್ಲಿ ಸ್ಥಳೀಯರ ಪರವಾಗಿ ಕಾರ್ಪೊರೇಟರ್ ಶಕೀಲಾ ಕಾವ ಸನ್ಮಾನಿಸಿದರು. ಬಿಜೆಪಿ ವಾಣಿಜ್ಯ ಪ್ರಕೋಷ್ಠದ ರಾಮಕೃಷ್ಣ ಮತ್ತಿತರರು ಹಾಜರಿದ್ದರು.
PublicNext
01/01/2022 03:34 pm