ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಏಷ್ಯನ್ ಪವರ್ ಲಿಫ್ಟಿಂಗ್ ಸ್ಪರ್ಧೆ : 4 ಚಿನ್ನದ ಪದಕ ಜಯಿಸಿದ ಮಂಗಳೂರಿನ ದೀಪಾ

ಮಂಗಳೂರು: ಟರ್ಕಿ ಇಸ್ತಾಂಬುಲ್ ನಲ್ಲಿ ನಡೆಯುತ್ತಿರುವ ಏಷ್ಯನ್ ಪವರ್ ಲಿಫ್ಟಿಂಗ್ ಹಾಗೂ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಮಾಸ್ಟರ್ ವಿಭಾಗ (76ಕಿಲೊ)ದಲ್ಲಿ ಮಂಗಳೂರಿನ ದೀಪಾ ಕೆ.ಎಸ್. 4 ಸ್ವರ್ಣ ಪದಕವನ್ನು ಗೆದ್ದಿದ್ದಾರೆ.

ಈ ಪಂದ್ಯಾ ಕೂಟವು ಡಿ.30ರವರೆಗೆ ನಡೆಯಲಿದ್ದು, ದೀಪಾ ಕೆ.ಎಸ್. ಅವರು ಕ್ಲಾಸಿಕ್ ಪವರ್ ಲಿಫ್ಟಿಂಗ್ ವಿಭಾಗದಲ್ಲಿ 4 ಸ್ವರ್ಣ ಪದಕಗಳನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ. ಅವರು ಪವರ್ ಲಿಪ್ಟರ್ ಪ್ರದೀಪ್ ಕುಮಾರ್ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ದೀಪಾ ಕೆ.ಎಸ್.ರವರು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ 2 ಸ್ವರ್ಣ ಪದಕ ಪಡೆದಿದ್ದ ಋತ್ವಿಕ್ ಅಲೆವೂರಾಯ ಅವರ ತಾಯಿ ಹಾಗೂ ಕುಂಜತ್ತೋಡಿ ವಾಸುದೇವ ಭಟ್ ಕದ್ರಿ ಪತ್ನಿಯಾಗಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

30/12/2021 03:02 pm

Cinque Terre

3.27 K

Cinque Terre

0

ಸಂಬಂಧಿತ ಸುದ್ದಿ