ಬಜಪೆ: ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಕಿರಿಯರ ರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್‍ಶಿಪ್-2021ರಲ್ಲಿ ಪಾಲ್ದನೆಯ ಕೇಂಬ್ರಿಡ್ಜ್ ಸ್ಕೂಲ್‍ನ 10ನೇ ತರಗತಿಯ ವಿದ್ಯಾರ್ಥಿ ವಾಮಂಜೂರಿನ ಜಿ. ಆದಿತ್ಯ ಕಿರಣ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಜಿ. ಕಿರಣ್- ಸಿ.ಎಸ್. ಲೀಲಾವತಿ ದಂಪತಿ ಪುತ್ರನಾಗಿರುವ ಆದಿತ್ಯ ಇತ್ತೀಚೆಗೆ ಬಾಗಲಕೋಟೆಯಲ್ಲಿ ನಡೆದ ರಾಜ್ಯ ಮಟ್ಟದ ಡಬ್ಲ್ಯುಯುಎಸ್‍ಎಚ್‍ಯು ಚಾಂಪಿಯನ್‍ಶಿಪ್ ಮತ್ತು ಮೈಸೂರಿನಲ್ಲಿ ಜರುಗಿದ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್‍ನಲ್ಲಿ ಒಟ್ಟು ಮೂರು ಚಿನ್ನದ ಪದಕ ಜಯಿಸಿದ್ದರು.
ಆದಿತ್ಯ ಕಾವೂರಿನ ಇನ್‍ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಮಾರ್ಷಲ್ ಆರ್ಟ್ಸ್(ಐಕೆಎಂಎ) ಸಂಸ್ಥೆಯಲ್ಲಿ ಕಿಕ್ ಬಾಕ್ಸಿಂಗ್ ವಿದ್ಯಾರ್ಥಿಯಾಗಿದ್ದು, ನಿತಿನ್ ಎನ್. ಸುವರ್ಣ ಮತ್ತು ಸಂಪತ್ ಕುಮಾರ್ ತರಬೇತುದಾರರಾಗಿದ್ದಾರೆ.
Kshetra Samachara
28/12/2021 05:29 pm