ಮುಲ್ಕಿ: ಹಳೆಯಂಗಡಿಯ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ನೇತೃತ್ವದಲ್ಲಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್(ರಿ)ವತಿಯಿಂದ ಟೇಬಲ್ ಟೆನ್ನಿಸ್ ಪಂದ್ಯಾಟಕ್ಕೆ ಮಾಜಿ ಸಚಿವ ರಮಾನಾಥ ರೈ ಚಾಲನೆ ನೀಡಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ ಎಸ್.ಎಸ್.ನಾಯಕ್ ಮಾತನಾಡಿ ಕ್ರೀಡೆ ಮನುಷ್ಯನ ಜೀವನದ ಒಂದು ಅಂಗವಾಗಿದ್ದು ಪ್ರೋತ್ಸಾಹ ನೀಡುತ್ತಿರುವ ಕ್ಲಬ್ ಕಾರ್ಯ ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ಪಣಂಬೂರು ಎಸಿಪಿ ಮಹೇಶ್ ಕುಮಾರ್, ಉದ್ಯಮಿ ನಾಗಭೂಷಣ್ ರೆಡ್ಡಿ, ಗುತ್ತಿಗೆದಾರ ಸುಂದರ್ ಶೆಟ್ಟಿ ಟೋರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ರಮೇಶ್ ಶೆಟ್ಟಿ, ಕೃನಾಲ್ ತಲಂಗ್,ಮ.ನ.ಪಾ. ಮಾಜಿ ಸದಸ್ಯೆ ಪ್ರತಿಭಾ ಕುಳಾಯಿ, ಉದ್ಯಮಿ ಗುರುರಾಜ ಎಸ್ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.
ಸ್ಪೋರ್ಟ್ಸ್ ಕ್ಲಬ್ ನ ನಿರ್ದೇಶಕ ಗೌತಮ್ ಶೆಟ್ಟಿ ಸ್ವಾಗತಿಸಿದರು. ಪ್ರಿಯಾಂಕ ಪಾಟೀಲ್ ನಿರೂಪಿಸಿದರು.ಎರಡು ದಿನಗಳ ಕಾಲ ನಡೆಯುವ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಅಂತರಾಷ್ಟ್ರೀಯ,ದೇಶೀಯ ಹಾಗೂ ರಾಜ್ಯಮಟ್ಟದ ಹೆಸರುವಾಸಿ ಆಟಗಾರರು ಭಾಗವಹಿಸಲಿದ್ದಾರೆ.
ದೇಶ ವಿದೇಶಗಳ ಪ್ರಸಿದ್ಧ,ಉದ್ಯಮಿಗಳ ಹಾಗೂ ಕ್ರೀಡಾ ಪ್ರೋತ್ಸಾಹಕರ 12 ಫ್ರಾಂಚೈಸಿಗಳು ಪ್ರತಿಷ್ಠಿತ ಟೊರ್ಪೆಡೋಸ್ ಸ್ಪೋರ್ಟ್ಸ್ ಕಾರ್ನಿವಲ್-ಟೇಬಲ್ ಟೆನ್ನಿಸ್ ಚಾಂಪಿಯನ್ಶಿಪ್ ಪಟ್ಟಕ್ಕಾಗಿ ಕಾದಾಡಲಿದ್ದಾರೆ.
ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದ ಪ್ರಮುಖ ಆಟಗಾರರಾದ ಕೌಶಿನಿ ನಾಥ್,
ಉತ್ತರಪ್ರದೇಶದ ಮನೀಶ್ ಯಾದವ್, ಪಶ್ಚಿಮ ಬಂಗಾಳದ ಸೌಮ್ಯಜಿತ್ ಬೋಸ್, ಭಾರತದ ಟಾಪ್ ಟೆನ್ ಆಟಗಾರ್ತಿ
ಖುಶಿ ವಿ, ರಾಷ್ಟ್ರೀಯ ಬೆಳ್ಳಿ ಪದಕ ವಿಜೇತ ಅಕ್ಷಯ್ ಮಹಂತ, ತೆಲಂಗಾಣದ ಖ್ಯಾತ ಆಟಗಾರ ಆಲಿ ಮೊಹಮ್ಮದ್, ರಾಷ್ಟ್ರೀಯ ಮಟ್ಟದ ಆಟಗಾರ ಕಲೈವನನ್ ಎಮ್, ಭಾರತದ ಟಾಪ್ ನಾಲ್ಕನೇ ಆಟಗಾರ ಮೊಹಮ್ಮದ್ ಅಲಿ,ಕರ್ನಾಟಕದ ಯುವಕರ ತಂಡದ ರಾಜ್ಯ ಚಾಂಪಿಯನ್ ರಕ್ಷಿತ್ .ಆರ್ ಬರಿಗ್ದಾದ್, ಶ್ರೇಯಲ್ ತೇಲಂಗ್ ,ರಾಜು ಕುಂಡು,ಸೆನ್ಹೋರ ಸೋಸ್ಟರ್ ಡಿ ಸೋಜಾ ಟೇಬಲ್ ಟೆನ್ನಿಸ್ ಟೂರ್ನಮೆಂಟ್ ನಲ್ಲಿ ಭಾಗವಹಿಸಲಿದ್ದು ಸ್ಪರ್ಧೆ ರೋಮಾಂಚನ ನೀಡಲಿದೆ ಎಂದು ಗೌತಮ್ ಶೆಟ್ಟಿ ತಿಳಿಸಿದ್ದಾರೆ.
Kshetra Samachara
06/11/2021 01:32 pm