ಮುಲ್ಕಿ: ಐಕಳ ಕಾಂತಾಬಾರೆ ಬುದಾಬಾರೆ ಪ್ರೆಂಡ್ಸ್ ಕ್ಲಬ್ ಐಕಳ ಕ್ರೀಡಾಕೂಟದ ಜೊತೆ ಸಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿರುವುದು ಅಭಿನಂದನೀಯ ಎಂದು ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ಹೇಳಿದರು
ಅವರು ಕಾಂತಾಬಾರೆ ಬೂದಾಬಾರೆ ಪ್ರೆಂಡ್ಸ್ ಕ್ಲಬ್ ಐಕಳ ಇದರ ಅಶ್ರಯದಲ್ಲಿ ಸಾಮಾಜಿಕ ಸೇವಾ ಚಟಯವಟಿಕೆಗಳ ಸಹಾಯಾರ್ಥವಾಗಿ ಗ್ರಾಮೀಣ ಮಟ್ಟದ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟ 2021 ಇದರ ಸಮಾರೋಪ ಸಮಾಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಸಂಸ್ಥೆ ಐಕಳ ಗ್ರಾಮಕ್ಕೆ ಒಂದು ಶಕ್ತಿ, ಸಂಘಟನೆ ಮಾಡುವುದು ಸುಲಭದ ಕೆಲಸವಲ್ಲ ಆದರೆ ಐಕಳದ ಈ ಸಂಸ್ಥೆ ಯಶಸ್ವೀಯಾಗಿ ಮುನ್ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವೈದ್ಯಕೀಯ ಚಿಕಿತ್ಸೆಗೆ ನೆರವು ಕೋರೋನಾ ವಾರ್ಯರ್ರ್ಸ್ ಶೋಭಾ ರವರಿಗೆ ಗೌರವ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಮುಖ್ಯಅತಿಥಿಗಳಾಗಿ ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ಸ್ವರಾಜ್ ಶೆಟ್ಟಿ, ಬಸ್ಸು ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ, ಎ.ಪಿ.ಎಂ.ಸಿ ಮಾಜೀ ಅಧ್ಯಕ್ಷ ಪ್ರಮೋದ್ ಕಿನ್ನಿಗೋಳಿ, ಐಕಳ ಗ್ರಾ ಪಂ ಉಪಾಧ್ಯಕ್ಷ ರಾಜೇಶ್ ಶೆಟ್ಟಿ, ಸದಸ್ಯ ದಯೇಶ್ ಚಿತ್ತರಂಜನ್ ಭಂಡಾರಿ ಐಕಳ ಬಾವ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ಉದ್ಯಮಿ ಸ್ಯಾನೀ ಪಿಂಟೋ, ಕೃಷ್ಣಾನಂದ ಶೆಟ್ಟಿ ಐಕಳ, ಕೃಷ್ಣ ಮಾರ್ಲ, ಸುಧಾಮ ಶೆಟ್ಟಿ, ತಾರನಾಥ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು,
ಶ್ರೀಶ ಐಕಳ ಮತ್ತು ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು.
ವಾಲಿಬಾಲ್ ಪಂದ್ಯಾಟದ ಪ್ರಥಮ ಬಹುಮಾನವನ್ನು ಕಾಂತಾಬಾರೆ ಬೂದಾಬಾರೆ ಪ್ರೆಂಡ್ಸ್ ಐಕಳ, ದ್ವಿತೀಯ ಬಹುಮಾನವನ್ನು ಕಾಪಿಕಾಡು ಪ್ರೆಂಡ್ಸ್ ತಂಡದವರು ಪಡೆದರು.
Kshetra Samachara
24/10/2021 08:47 pm