ಬೆಂಗಳೂರು: ಇಲ್ಲಿನ ವಿಜಯನಗರ ಸ್ವಿಮ್ಮಿಂಗ್ ಫೂಲ್ ನಲ್ಲಿ ಜರುಗಿದ ರಾಜ್ಯಮಟ್ಟದ 22ನೇ ಮಾಸ್ಟರ್ಸ್ ಈಜು ಚಾಂಪಿಯನ್ ಶಿಪ್ ನಲ್ಲಿ ಮಂಗಳೂರು ಬೆಂಗ್ರೆಯ ದಂಪತಿಯಾದ ಪುಂಡಲೀಕ ಖಾರ್ವಿ ಹಾಗೂ ಸುಮನಾ ಖಾರ್ವಿ ಅವರು ಒಟ್ಟು 5 ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕಗಳನ್ನು ಗೆದ್ದು, ಗಮನಾರ್ಹ ಸಾಧನೆ ಮೆರೆದಿದ್ದಾರೆ.
ಪುಂಡಲೀಕ ಖಾರ್ವಿ ಅವರು 100 ಮೀಟರ್ ಫ್ರೀಸ್ಟೈಲ್ ಈಜಿನಲ್ಲಿ ಚಿನ್ನ, 50 ಮೀ. ಬ್ಯಾಕ್ ಸ್ಟ್ರೋಕ್ ನಲ್ಲಿ ಚಿನ್ನ, 4*50 ಮೀ. ಫ್ರೀಸ್ಟೈಲ್ ರಿಲೇಯಲ್ಲಿ ಚಿನ್ನ, 4*50 ಮೀ. ಮಿಡ್ಲೇ ರಿಲೇಯಲ್ಲಿ ಚಿನ್ನ ಹಾಗೂ 50 ಮೀ. ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಸುಮನಾ ಖಾರ್ವಿ ಅವರು 50 ಮೀಟರ್ ಬ್ಯಾಕ್ ಸ್ಟ್ರೋಕ್ ನಲ್ಲಿ ಚಿನ್ನ ಮತ್ತು 50 ಮೀ. ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದಾರೆ.
Kshetra Samachara
17/10/2021 01:28 pm