ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಅ.1 ರಿಂದ 4ರವೆರೆಗೆ : ಆಳ್ವಾಸ್ ಕಾಲೇಜಿನಲ್ಲಿ ರಾಜ್ಯಮಟ್ಟದ ವುಶು ಕ್ರೀಡಾಕೂಟ

ಮಂಗಳೂರು: ಮೂಡುಬಿದಿರೆ ಆಳ್ವಾಸ್ ಕಾಲೇಜಿನ ನುಡಿಸಿರಿ ವಿರಾಸತ್ ಸಭಾಂಗಣದಲ್ಲಿ ಅ.1 ರಿಂದ 4ರವೆರೆಗೆ 20ನೇ ರಾಜ್ಯಮಟ್ಟದ ವುಶು ಕ್ರೀಡಾಕೂಟವನ್ನು ದ.ಕ.ಜಿಲ್ಲಾ ವುಶು ಅಸೋಸಿಯೇಷನ್ ಆಯೋಜಿಸಿದೆ ಎಂದು ಅಸೋಸಿಯೇಷನ್ ನ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ತಿಳಿಸಿದರು.

ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಚೀನಾದ ವುಶು ಕ್ರೀಡೆಯನ್ನು ಕ್ರೀಡಾಪ್ರೇಮಿಗಳಿಗೆ ಪರಿಚಯಿಸುವ ಸಲುವಾಗಿ ಆಯೋಜಿಸಲಾಗಿದೆ. ಈ ಕ್ರೀಡಾಕೂಟದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ವಿವಿಧ ವಿಭಾಗಗಳಲ್ಲಿ ಆಯ್ಕೆಯಾಗಿರುವ ಸುಮಾರು 600 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ವುಶು ಕ್ರೀಡೆಯು ಚೀನಾದೇಶದ ಸಮರ ಕಲೆಯಾದ ಕುಂಗ್ ಫುನ ಕ್ರೀಡಾರೂಪವಾಗಿದೆ‌. ದ.ಕ.ಜಿಲ್ಲಾ ವುಶು ಅಸೋಸಿಯೇಷನ್ ಕಳೆದ ಮೂರು ವರ್ಷಗಳಿಂದ ವುಶು ಕ್ರೀಡಾ ತರಬೇತಿ ಹಾಗೂ ಚಟುವಟಿಕೆಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಸತತ 2 ವರ್ಷಗಳಿಂದ ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿ ಪ್ರಶಸ್ತಿ ಗಳಿಸುತ್ತಿದ್ದಾರೆ ಎಂದು ಸತ್ಯಜಿತ್‌ ಸುರತ್ಕಲ್ ಹೇಳಿದರು

Edited By : Manjunath H D
Kshetra Samachara

Kshetra Samachara

09/09/2021 04:31 pm

Cinque Terre

39.37 K

Cinque Terre

0

ಸಂಬಂಧಿತ ಸುದ್ದಿ