ಮಣಿಪಾಲ: ನೇಷನ್ ಫಸ್ಟ್ ತಂಡ "ಫಿಟ್ ರಹೋ ಉಡುಪಿ" ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜಿಸಿರುವ 75 ಕಿ.ಮೀ ಮ್ಯಾರಥಾನ್ ಓಟ ಮಾಹೆ (MAHE) ಮಣಿಪಾಲ ತಲುಪಿದ್ದು, ಮಾಹೆ ಕುಲಪತಿಗಳಾದ ಎಂ.ಡಿ. ವೆಂಕಟೇಶ್ ಹಾಗೂ ಸಹ ಕುಲಾಧಿಪತಿಗಳಾದ ಎಚ್. ಎಸ್. ಬಲ್ಲಾಲ್ ಅವರೊಂದಿಗೆ ಶಾಸಕ ಕೆ. ರಘುಪತಿ ಭಟ್ ರವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ಮಹೇಶ್ ಠಾಕೂರ್, ನೇಶನ್ ಫಸ್ಟ್ ತಂಡದ ಮೇಜರ್ ಪ್ರಕಾಶ್ ರಾವ್ ಹಾಗೂ ಸೂರಜ್ ಕಿದಿಯೂರು ಮತ್ತು ಪ್ರಮುಖರು ಉಪಸ್ಥಿತರಿದ್ದರು.
Kshetra Samachara
06/09/2021 10:43 am