ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಯಮತ್ತೂರು: ಸೀನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್; ಚಿನ್ನ ಗೆದ್ದ ಮಂಗಳೂರಿನ ಪ್ರದೀಪ್ ಆಚಾರ್ಯ

ಮಂಗಳೂರು: ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಮಂಗಳೂರಿನ ಪ್ರದೀಪ್ ಕುಮಾರ್ ಆಚಾರ್ಯ ಬಂಗಾರದ ಪದಕ ಸಹಿತ ಮೂರು ಪದಕಗಳನ್ನು ಗೆದ್ದಿದ್ದಾರೆ.

ಫೆ.17 ರಿಂದ 21ರ ವರೆಗೆ ನಡೆದ ಈ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುವ ಪ್ರದೀಪ್ 83 ಕೆ.ಜಿ. ದೇಹತೂಕ ವಿಭಾಗದಲ್ಲಿ ಒಟ್ಟು 807 ಕೆ.ಜಿ. ಭಾರ ಎತ್ತುವ ಮೂಲಕ ತಲಾ ಒಂದೊಂದು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದು ಗಮನಾರ್ಹ ಸಾಧನೆ ಮೆರೆದಿದ್ದಾರೆ.

ಪ್ರದೀಪ್ ಕುಮಾರ್ ಸ್ನ್ವಾಚ್ ವಿಭಾಗದಲ್ಲಿ 312.50 ಕೆ.ಜಿ., ಬೆಂಚ್ ಪ್ರೆಸ್ ನಲ್ಲಿ 220 ಕೆ.ಜಿ. ಹಾಗೂ ಡೆಡ್ ಲಿಫ್ಟ್ ನಲ್ಲಿ 275 ಕೆ.ಜಿ. ಸೇರಿ ಒಟ್ಟು 807.50 ಕೆ.ಜಿ. ಭಾರ ಎತ್ತುವ ಮೂಲಕ ಮೂರು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ‌.

ಪ್ರದೀಪ್ ಅವರು ಮಂಗಳೂರಿನ ಪ್ರತಿಷ್ಠಿತ ಶ್ರೀ ಬಾಲಾಂಜನೇಯ ಜಿಮ್ನೇಶಿಯಂನಲ್ಲಿ ಸತೀಶ್ ಕುಮಾರ್ ಕುದ್ರೋಳಿಯವರಿಂದ ತರಬೇತಿ ಪಡೆಯುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

21/02/2021 08:31 pm

Cinque Terre

18.23 K

Cinque Terre

1

ಸಂಬಂಧಿತ ಸುದ್ದಿ