ಮುಲ್ಕಿ: ಇಲ್ಲಿನ ಬಪ್ಪನಾಡು ದೇವಳದ ವಠಾರದಲ್ಲಿ ಪಂಚ ದುರ್ಗಾ ಬಪ್ಪನಾಡು ಆಶ್ರಯದಲ್ಲಿ ನಡೆದ ಪ್ರೊ ಕಬಡ್ಡಿ ಮಾದರಿಯಲ್ಲಿ ಮುಲ್ಕಿ ವಲಯದ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಫ್ರೆಂಡ್ಸ್ ಕೊಲ್ನಾಡು ತಂಡ ನಗದನ್ನು ಅಂತಿಮ ರೋಮಾಂಚಕಾರಿ ಹಣಾಹಣಿಯಲ್ಲಿ ಫ್ರೆಂಡ್ಸ್ ಕೋಲ್ನಾಡು ತಂಡವು ಜಾಗ್ವಾರ್ ಬಜ್ಪೆ ತಂಡವನ್ನು 15 - 8 ಅಂತರ ಗಳಿಂದ ಸೋಲಿಸಿ ಟ್ರೋಪಿಯನ್ನು ತನ್ನದಾಗಿಸಿಕೊಂಡಿತು. ಸುಮಾರು 20 ತಂಡಗಳು ಭಾಗವಹಿಸಿದ್ದ ಪಂದ್ಯಾಟದ ಬೆಸ್ಟ್ ರೈಡರ್, ಕ್ಯಾಚರ್ ಆಗಿ ಫ್ರೆಂಡ್ಸ್ ಕೊಲ್ನಾಡು ತಂಡದ ನಿಸಾನ್ ಕೊಲ್ನಾಡು, ಖಾದರ್ ಕೊಲ್ನಾಡು ಪ್ರಶಸ್ತಿ ಗಳಿಸಿದರೆ, ಉತ್ತಮ ಆಲ್-ರೌಂಡರ್ ಪ್ರಶಸ್ತಿಯನ್ನು ಜಾಗ್ವಾರ್ ಬಜ್ಪೆ ತಂಡದ ಅರುಣ್ ಬಜ್ಪೆ ಪಡೆದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ ಕಮಲಾಕ್ಷ ಬಡಗುಹಿತ್ಲು ವಹಿಸಿದ್ದರು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮುಲ್ಕಿ ಲಯನ್ಸ್ ಮಾಜೀ ಅಧ್ಯಕ್ಷ ವೆಂಕಟೇಶ ಹೆಬ್ಬಾರ್, ಉದ್ಯಮಿ ನೂರ್ ಅಹಮದ್ ಹೆಜಮಾಡಿ, ಪತ್ರಕರ್ತ ಪುನೀತ ಕೃಷ್ಣ, ಪಂಚ ದುರ್ಗಾ ಬಪ್ಪನಾಡು ಅಧ್ಯಕ್ಷ ಚಂದ್ರಶೇಖರ್ ಭಂಡಾರಿ ಉಪಸ್ಥಿತರಿದ್ದು ಬಹುಮಾನ ವಿತರಿಸಲಾಯಿತು.ಉತ್ತಮ ತೀರ್ಪುಗಾರರಾಗಿ ಹಾಗೂ ವೀಕ್ಷಕ ವಿವರಣೆಯಲ್ಲಿ ಸಹಕರಿಸಿದ್ದ ಮುಲ್ಕಿ ಕಾಲೇಜಿನ ದೈಹಿಕ ಶಿಕ್ಷಕ ನವೀನ್, ಕಟೀಲು ಕಾಲೇಜಿನ ಪುಂಡಲೀಕ ಕೊಠಾರಿ, ಬಾಸ್ಕರ್ ಪಾಲಡ್ಕ, ರಾಕೇಶ್ ಮುಲ್ಕಿ, ಅರುಣ್ ಬಜ್ಪೆ, ರಫಿಕ್ ಕೊಲ್ನಾಡು ರವರನ್ನು ಗೌರವಿಸಲಾಯಿತು. ದಿನೇಶ್ ಕೊಲ್ನಾಡು ಕಾರ್ಯಕ್ರಮ ನಿರೂಪಿಸಿದರು.
Kshetra Samachara
27/01/2021 11:38 am