ನೆಲ್ಯಾಡಿ: ಸದಾ ಕೆಲಸದ ಒತ್ತಡದಲ್ಲಿರುವ ಪೊಲೀಸ್, ಮೆಸ್ಕಾಂ, ಅರಣ್ಯ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳು ನಿನ್ನೆ ಗಣರಾಜ್ಯೋತ್ಸವದಂದು ಸ್ವಲ್ಪ ಸಮಯದ ಮಟ್ಟಿಗೆ ಆರಾಮವಾಗಿ ಕ್ರಿಕೆಟ್ ಆಟದ ಸ್ಪರ್ಧೆಯಲ್ಲಿ ತಲ್ಲೀನರಾಗಿದ್ದ ದೃಶ್ಯ ಕಂಡುಬಂದಿತ್ತು.
ಅಂದ ಹಾಗೇ ಈ ನೋಟ ಕಂಡುಬಂದಿದ್ದು, ಕಡಬ ತಾಲೂಕಿನ ಕೊಣಾಲು ಸರಕಾರಿ ಶಾಲಾ ಮೈದಾನದಲ್ಲಿ. ಮಿಲೇನಿಯಂ ಬ್ರದರ್ಸ್ ಕೋಲ್ಪೆ ವತಿಯಿಂದ ನಡೆದ ಕೋಲ್ಪೆ ಪ್ರೀಮಿಯರ್ ಲೀಗ್ ಸೀಸನ್-6 ರಲ್ಲಿ ಉಪ್ಪಿನಂಗಡಿ ಪೊಲೀಸರ ತಂಡ, ಪಂಜ ವಲಯ ಅರಣ್ಯಾಧಿಕಾರಿಗಳ ತಂಡ, ಮೆಸ್ಕಾಂ ನೆಲ್ಯಾಡಿ ತಂಡ, ಲಾರಿ ಚಾಲಕ- ಮಾಲಕರ ತಂಡ ಭಾಗವಹಿಸಿತ್ತು.
ಯಾವಾಗಲೂ ಕಾರ್ಯದೊತ್ತಡದಲ್ಲಿರುವ ಈ ಸಿಬ್ಬಂದಿ, ಅಧಿಕಾರಿಗಳ ತಂಡ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಮುಗಿಸಿ, ನಂತರ ಗ್ರೌಂಡ್ ನಲ್ಲಿ ಕ್ರಿಕೆಟ್ ಆಡುವ ಮೂಲಕ ರಿಲ್ಯಾಕ್ಸ್ ಮೂಡ್ ನಲ್ಲಿದ್ದರು.
ಈ ಕ್ರಿಕೆಟ್ ಸ್ಪರ್ಧೆಯಲ್ಲಿ ಉಪ್ಪಿನಂಗಡಿ ಪೊಲೀಸರ ತಂಡ ಪ್ರಥಮ ಬಹುಮಾನ ಪಡೆಯಿತು. ಪಂಜ ಅರಣ್ಯಾಧಿಕಾರಿಗಳ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
Kshetra Samachara
27/01/2021 11:30 am