ಮಂಗಳೂರು: ಕರ್ತವ್ಯದ ಒತ್ತಡದ ನಡುವೆಯೂ ಬ್ಯಾಟ್ ಹಿಡಿದು ಫೀಲ್ಡ್ ಗೆ ಇಳಿದ ಮಂಗಳೂರು ನಗರ ನೂತನ ಪೊಲೀಸ್ ಕಮಿಷನರ್ ಅವರು ಉಳ್ಳಾಲದ ಕೋಡಿಯಲ್ಲಿ ಯುವಕರೊಂದಿಗೆ ಕ್ರಿಕೆಟ್ ಆಡಿ ಕೊಂಚ ರಿಲ್ಯಾಕ್ಸ್ ಮಾಡಿಕೊಂಡರು.
ಕೋಡಿ, ಮೊಗವೀರಪಟ್ಣ, ಕೋಟೆಪುರ, ಮಾಸ್ತಿಕಟ್ಟೆ, ಉಳ್ಳಾಲ, ಒಳಪೇಟೆ ಮತ್ತು ತೊಕೊಟ್ಟು ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭ ನೂತನ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅಲ್ಲಿನ ಜನರೊಂದಿಗೆ ಸಂವಾದ ನಡೆಸಿದರು. ಅಲ್ಲದೆ, ಧಾರ್ಮಿಕ ಕ್ಷೇತ್ರಗಳಿಗೂ ಭೇಟಿ ನೀಡಿದರು. ಈ ನಡುವೆ ಉಳ್ಳಾಲದ ಕೋಡಿ ಎಂಬ ಪ್ರದೇಶಕ್ಕೆ ಬಂದ ಪೊಲೀಸ್ ಕಮಿಷನರ್, ಕ್ರಿಕೆಟ್ ಟೂರ್ನಿ ಯೊಂದರ ವೇಳೆ ಯುವಕರೊಂದಿಗೆ ತಾನೂ ಕ್ರಿಕೆಟ್ ಆಟ ಆಡಿ, ಕೆಲವೊಂದು ಆಕರ್ಷಕ ಬ್ಯಾಟಿಂಗ್ ಸ್ಟ್ರೋಕ್ ಪ್ರದರ್ಶಿಸಿದರು.
ಮೊನ್ನೆ ತಾನೇ ನಗರದ ಪಾಂಡೇಶ್ವರದ ಶ್ರೀ ಮಹಾಲಿಂಗೇಶ್ವರ ದೇಗುಲದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಭಕ್ತಿಗೀತೆ ಹಾಡಿದ್ದ ಪೊಲೀಸ್ ಕಮಿಷನರ್ ಅವರು ಇದೀಗ ಯುವಕರೊಂದಿಗೆ ಕ್ರಿಕೆಟ್ ಆಡಿ ಗಮನ ಮತ್ತೊಮ್ಮೆ ಸೆಳೆದಿದ್ದಾರೆ.
Kshetra Samachara
10/01/2021 01:19 pm