ವರದಿ: ರಹೀಂ ಉಜಿರೆ
ಕಡೆಕಾರು: ಸಾಧಿಸಬೇಕೆಂಬ ಹುಚ್ಚು ಹಠ ಒಮ್ಮೆ ಮನದೊಳಗೆ ಹೊಕ್ಕು ಬಿಟ್ಟರೆ ಸಾಕು ,ಮತ್ತೆ ಎಂತಹ ಸಾಧನೆಯಾದರೂ ,ಸೈ. ಹಿಂಜರಿಯುವ ಮಾತೇ ಉದ್ಭವಿಸುವುದಿಲ್ಲ. ಇದಕ್ಕೆ ಉದಾಹರಣೆ ,ಕಡೆಕಾರು ಗ್ರಾಮದ ಗಂಗಾಧರ್.66 ರ ಹರೆಯದ ಈಜು ಪಟು ಗಂದಾಧರ್ ,ಯುವಕರನ್ನೂ ನಾಚಿಸುವ ಉತ್ಸಾಹಿ ಈಜುಗಾರ.
ಈಜಿನಲ್ಲಿ ವಿಶೇಷ ಚಾಕಚಕ್ಯತೆ ಪಡೆದಿರುವ ಗಂಗಾಧರ್ 65ರ ಹರೆಯದಲ್ಲೂ ಸಮುದ್ರದಲ್ಲಿ ಪದ್ಮಾಸನ ಶೈಲಿಯಲ್ಲಿ (ಪದ್ಮಾಸನ ಭಂಗಿಯಲ್ಲಿ ಕಾಲುಗಳನ್ನು ಮಡಚಿ, ಸರಪಳಿಯಿಂದ ಬಿಗಿದು, ಬ್ರೆಸ್ವ್ ಸ್ಟೊ್ರೕಕ್ ಶೈಲಿಯಲ್ಲಿ) ಸಮುದ್ರದಲ್ಲಿ 1.40 ಕಿ.ಮಿ. ಈಜಿ ದಾಖಲೆ ನಿರ್ಮಿಸಿದ್ದು ಕಳೆದ ವರ್ಷ.
ಇದಕ್ಕಾಗಿ ,ವರ್ಷದ ಹಿಂದೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಇದೀಗ ತಮ್ಮ 66 ನೇ ವರ್ಷದಲ್ಲಿ ಮತ್ತೊಂದು ಕಡಲ ಸಾಹಸಕ್ಕೆ ಅಣಿಯಾಗುತ್ತಿದ್ದಾರೆ.
ಗಂಗಾಧರ್ ಇದೇ ಜ.24 ರಂದು ಕೈ ಮತ್ತು ಕಾಲುಗಳಿಗೆ ಕೋಳ ತೊಟ್ಟು ಸಮುದ್ರದಲ್ಲಿ 3.5 ಕಿ.ಮೀ ಈಜಿ ವಿಶ್ವದಾಖಲೆ ನಿರ್ಮಿಸಲು ಸಜ್ಜಾಗುತ್ತಿದ್ದಾರೆ.ಈ ವಿಶಿಷ್ಡ ದಾಖಲೆಯ ಈಜಿಗೆ ಸಚಿವ ಸುನಿಲ್ ಕುಮಾರ್ ಸಹಿತ ಗಣ್ಯರು ಸಾಕ್ಷಿಯಾಗಲಿದ್ದಾರೆ.ಸದ್ಯ ಮಕ್ಕಳಿಗೆ ಸಮುದ್ರದಲ್ಲಿ ಈಜು ಕಲಿಸುತ್ತಿರುವ ಗಂಗಾಧರ್ ಜಿ ,ಸಾಧನೆ ಮಾಡುವವರಿಗೊಂದು ಪ್ರೇರಣೆ.
PublicNext
21/01/2022 10:21 am