ಉಡುಪಿ: ಉಡುಪಿಯ ಹನ್ನೊಂದರ ಹರೆಯದ ಬಾಲಕಿ ತನುಶ್ರೀ ಪಿತ್ರೋಡಿ ಅವರು ಇಂದು ಯೋಗಾಸನ ಭಂಗಿಯಲ್ಲಿ ಮಹತ್ಸಾಧನೆ ಮಾಡುವ ಮೂಲಕ 6ನೇ ವಿಶ್ವದಾಖಲೆಗೆ ಭಾಜನರಾಗಿದ್ದಾರೆ!
ಉಡುಪಿಯ ಸೈಂಟ್ ಸಿಸಿಲೀಸ್ ಶಾಲೆಯ ಆವರಣದಲ್ಲಿ ‘ಮೋಸ್ಟ್ ಬ್ಯಾಕ್‌ವರ್ಡ್ಸ್ ಬಾಡಿ ಸ್ಕಿಪ್ ಇನ್ ಒನ್ ಮಿನಿಟ್’ ವಿಭಾಗದಲ್ಲಿ ಒಂದು ನಿಮಿಷದಲ್ಲಿ 55 ಬ್ಯಾಕ್ ವರ್ಡ್ಸ್ ಬಾಡಿ ಸ್ಕಿಪ್ ಮಾಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆಗೊಂಡಿದ್ದಾರೆ. ಈ ಸಾಧನೆಯನ್ನು ಈ ಹಿಂದೆ ಯಾರೂ ಮಾಡಿಲ್ಲ!
ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ನ ಅಧಿಕಾರಿಗಳೇ ಈ ಕ್ಷಣದಲ್ಲಿ ಖುದ್ದು ಸಾಕ್ಷಿಯಾಗಿ ವೀಕ್ಷಿಸಿ ಚಕಿತಗೊಂಡರು. ತನುಶ್ರೀ ಈ ದೊಡ್ಡ ಸಾಧನೆ ಮಾಡುವಾಗ ನೆರೆದ ಜನರು ಚಪ್ಪಾಳೆ ತಟ್ಟಿ, ಶಿಳ್ಳೆ ಹಾಕಿ ಪ್ರೋತ್ಸಾಹಿಸಿದರು.
ನಿರಾಲಾಂಬ ಪೂರ್ಣ ಚಕ್ರಾಸನ,ಮೋಸ್ಟ್ ಫುಲ್ ಬಾಡಿ ರೆವಲ್ಯೂಷನ್ ಮೈನ್‌ಟೈನಿಂಗ್ ಎ ಚೆಸ್ಟ್ ಸ್ಟಾಂಡ್ ಪೊಸಿಷನ್’, ಇಟಲಿಯ ರೋಮ್‌ನಲ್ಲಿ ಗಿನ್ನೆಸ್ ದಾಖಲೆಯ ಸಾಧಕರೊಂದಿಗೆ ಸೇರಿ ಯೋಗ ಪ್ರದರ್ಶನ, ‘ಮೋಸ್ಟ್ ನಂಬರ್ ಆಫ್ ರೋಲ್ಸ್ ಇನ್ ವನ್ ಮಿನಿಟ್ ಇನ್ ಧನುರಾಸನ, ಚಕ್ರಾಸನ ರೇಸ್ ವಿಭಾಗದಲ್ಲಿ 100 ಮೀಟರ್ ಅಂತರವನ್ನು 1 ನಿಮಿಷ 14 ಸೆಕೆಂಡ್‌ಗಳಲ್ಲಿ ಕ್ರಮಿಸಿ ವಿಶ್ವದಾಖಲೆ!
ಇವಿಷ್ಟು ದಾಖಲೆಗಳ ಸರಮಾಲೆ ಈ ಬಾಲೆಯ ಹೆಸರಿನಲ್ಲಿವೆ. ಈಗ ಮತ್ತೊಂದು ವಿಶ್ವ ದಾಖಲೆಯ ಸೇರ್ಪಡೆಯಾಗಿದೆ.
Kshetra Samachara
06/02/2021 07:36 pm