ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:"ಉತ್ತಮ ಆರೋಗ್ಯದ ಜೊತೆಗೆ ಸ್ನೇಹ ಬಾಂಧವ್ಯಕ್ಕೆ ಕ್ರೀಡೆ ಸಹಕಾರಿ": ಅಶೋಕ್ ಕುಮಾರ್ ಶೆಟ್ಟಿ

ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಮೆಡಲಿನ್ ಪದವಿಪೂರ್ವ ಕಾಲೇಜು, ಜಂಟಿ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜು ವಿಭಾಗದ ಬಾಲಕ ಬಾಲಕಿಯರ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ಕಿಲ್ಪಾಡಿ ಮೆಡಲಿನ್ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೆಡಲಿನ್ ಕಾನ್ವೆಂಟ್ ಸುಪೀರಿಯರ್ ಭಗಿನಿ ಮಾರಿಯೋಲ ವಹಿಸಿದ್ರು. ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಅಶೋಕ್ ಕುಮಾರ್ ಶೆಟ್ಟಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿ, ಕ್ರೀಡೆಯಿಂದ ಉತ್ತಮ ಆರೋಗ್ಯದ ಜೊತೆಗೆ ಸ್ನೇಹ ಬಾಂಧವ್ಯ ಸೋಲು ಗೆಲುವುಗಳ ಮೂಲಕ ಆತ್ಮವಿಶ್ವಾಸ ಗಳಿಕೆ ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿ ಭಾರತೀಯ ಸೇನೆಯ ಮಾಜಿ ಸೈನಿಕ ವಿನ್ಸೆಂಟ್ ಡಿಸೋಜಾ, ಕಿಲ್ಪಾಡಿ ಗ್ರಾಪಂ ಉಪಾಧ್ಯಕ್ಷ ಗೋಪಿನಾಥ ಪಡಂಗ, ಕಾಲೇಜಿನ ಸಂಚಾಲಕಿ ಭಗಿನಿ ಮಾರಿಲೀಟಾ, ತಾಲೂಕು ಕ್ರೀಡಾ ಸಂಯೋಜಕಿ ಅಲ್ವಿನ್ ಮಿರಾಂದ, ಕಿಲ್ಪಾಡಿ ಬೆಥನಿ ಹಿರಿಯಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ರೀಟಾ ಶರಲ್, ಮುಲ್ಕಿ ನ.ಪಂ ಮಾಜೀ ಸದಸ್ಯ ಬಶೀರ್ ಕುಳಾಯಿ , ಮೆಡಲಿನ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ವೀಣಾ ಡಿಸೋಜಾ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಶಶಿ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

ಉಪನ್ಯಾಸಕರುಗಳಾದ ವಿಶಾಂತ್ ನಿರೂಪಿಸಿದರು, ಅಭಿಷೇಕ್ ಧನ್ಯವಾದ ಅರ್ಪಿಸಿದರು. ಬಳಿಕ ವಾಲಿಬಾಲ್ ಪಂದ್ಯಾಟ ನಡೆಯಿತು.

Edited By :
Kshetra Samachara

Kshetra Samachara

03/09/2022 03:22 pm

Cinque Terre

6.52 K

Cinque Terre

0