ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಏಳು ವಿಶ್ವದಾಖಲೆಗಳ ಒಡತಿ ಈ ಬಾಲಕಿ !

ವರದಿ: ರಹೀಂ ಉಹಿರೆ

ಉಡುಪಿ: ಈಕೆಗಿನ್ನೂ ಹದಿಮೂರರ ಹರೆಯ.ವಿಶ್ವದಾಖಲೆ ಮಾಡುವುದೆಂದರೆ ಇವಳಿಗೆ ನೀರು ಕುಡಿದಷ್ಟೇ ಸಲೀಸು.ವರ್ಷಕ್ಕೆರಡು ವಿಶ್ವದಾಖಲೆ ಮಾಡುವ ಈಕೆ ,ಇವತ್ತು ಸ್ವಾತಂತ್ರ್ಯೋತ್ಸವದ ಘಳಿಗೆಯಲ್ಲಿ ಮತ್ತೊಂದು ವಿಶ್ವದಾಖಲೆಗೆ ಭಾಜನಳಾಗಿದ್ದಾಳೆ.ಇದರೊಂದಿಗೆ ಸಣ್ಣ ಹರಯದಲ್ಲೇ ಏಳು ವಿಶ್ವದಾಖಲೆಯ ಒಡತಿ ಎಂಬ ಹಿರಿಮೆಗೆ ಈಕೆ ಪಾತ್ರಳಾದಳು.

ದೇಶ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿದ್ದರೆ ಉಡುಪಿಯ ಪಿತ್ರೋಡಿಯ ತನುಶ್ರೀ ಎಂಬ ಹದಿಮೂರರ ಪೋರಿ , ಏಳನೇ ವಿಶ್ವದಾಖಲೆ ಮಾಡಿ ಹೂನಗು ಬೀರಿದ್ದಾಳೆ! ಮೋಸ್ಟ್ ಯೋಗ ಪೋಸಸ್ ಪರ್ಫಾರ್ಮ್ ಡ್ ಇನ್ ಎ ರಿಲೆಯಲ್ಲಿ ವಿಶ್ವದಾಖಲೆ ಮಾಡಿದ್ದಾಳೆ.ಕೃಷ್ಣಮಠದ ರಾಜಾಂಗಣದಲ್ಲಿ ಈ ದಾಖಲೆ ಮಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ನ ಅಧಿಕಾರಿಗಳು ಮತ್ತು ಉಡುಪಿ ಜನತೆಯ ಸಮಕ್ಷಮ ಈ ಪೋರಿ ನೋಡನೋಡುತ್ತಲೇ,ನಿತಂತರ 43 ನಿಮಿಷದಲ್ಲಿ 245 ಆಸನಗಳನ್ನು ಪ್ರದರ್ಶಿಸಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಮತ್ತೊಮ್ಮೆ ತನ್ನ ಹೆಸರು ಅಚ್ಚಾಗಿಸುವುದರೊಂದಿಗೆ ಏಳನೇ ವಿಶ್ವದಾಖಲೆಗೆ ಭಾಜನಳಾದಳು

ಈಗಾಗಲೇ ಆರು ವಿಶ್ವದಾಖಲೆಯನ್ನು ತನ್ನ ಹೆಸರಿನಲ್ಲಿ ಬರೆದಿರುವ ತನುಶ್ರೀ ಈಗ ಎಂಟನೇ ತರಗತಿ ವಿದ್ಯಾರ್ಥಿನಿ ಎಂಬುದು ಗಮನಾರ್ಹ.ಈಕೆ ನಾಟ್ಯಮಯೂರಿ ಮತ್ತು ಯೋಗರತ್ನ ಬಿರುದಾಂಕಿತೆ.ಯೋಗಾಸನದ ವಿವಿಧ ಭಂಗಿಗಳಲ್ಲಿ 5 ವಿಶ್ವ ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದ ತನುಶ್ರೀ, ಕಳೆದ ವರ್ಷ "ಮೋಸ್ಟ್ ಬ್ಯಾಕ್‌ವರ್ಡ್ಸ್ ಬಾಡಿ ಸ್ಕಿಪ್ ಇನ್‌ ಒನ್ ಮಿನಿಟ್' ವಿಭಾಗದಲ್ಲಿ 55 ಬಾರಿ ಉರುಳುವ ಮೂಲಕ ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ ನಲ್ಲಿ ತನ್ನ ಹೆಸರನ್ನು ಸೇರ್ಪಡೆಗೊಳಿಸಿದ್ದಳು.ಇವತ್ತು ಇವಳ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಿಸಿದ್ದಾಳೆ.ಈಕೆಯ ಸಾಧನೆ ನೋಡಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ನ ಅಧಿಕಾರಿಗಳೇ ದಂಗಾದರು!

ಬಹುತೇಕ ಧಾರ್ಮಿಕ ಕಾರ್ಯಕ್ರಮಗಳೇ ಜರುಗುವ ಕೃಷ್ಣಮಠದ ರಾಜಾಂಗಣದಲ್ಲಿ ಈ ಬಾಲೆ ಮಾಡಿದ ಸಾಧನೆಗೆ ಪರ್ಯಾಯ ಸ್ವಾಮೀಜಿ,ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ನ ಅಧಿಕಾರಿಗಳು ಮತ್ತು ಉಡುಪಿಯ ಜನತೆ ಸಾಕ್ಷಿಯಾದರು.

Edited By : Manjunath H D
Kshetra Samachara

Kshetra Samachara

15/08/2021 06:14 pm

Cinque Terre

18.57 K

Cinque Terre

3

ಸಂಬಂಧಿತ ಸುದ್ದಿ