ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಆ.17ರಂದು‌ 50 ಸಾವಿರ ಯೋಗಪಟುಗಳಿಂದ ಯೋಗಥಾನ್; ದ.ಕ.ಜಿಲ್ಲಾಧಿಕಾರಿ

ಮಂಗಳೂರು: ನಗರದ ತಣ್ಣೀರುಬಾವಿ ಬೀಚ್ ಹಾಗೂ ಮೂಡುಬಿದಿರೆಯ ಆಳ್ವಾಸ್ ಮೈದಾನದಲ್ಲಿ 50 ಸಾವಿರ ಯೋಗಪಟುಗಳ ಸೇರುವಿಕೆಯಲ್ಲಿ‌ ಆ.17ರಂದು ಯೋಗಥಾನ್ ಕಾರ್ಯಕ್ರಮ ನಡೆಯಲಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.

ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಯೋಗಥಾನ್-2022 ಆಯೋಜನೆಯ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಣ್ಣೀರುಬಾವಿ ಬೀಚ್ ನಲ್ಲಿ 40,000 ಹಾಗೂ ಆಳ್ವಾಸ್ ಮೈದಾನದಲ್ಲಿ 10,000 ಯೋಗಪಟುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ, ಸಾರ್ವಜನಿಕ ಶಿಕ್ಷಣ, ಪದವಿ ಪೂರ್ವ ಶಿಕ್ಷಣ ಇಲಾಖೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಪೂರಕ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅವರು ನಿರ್ದೇಶನ ಮಾಡಿದರು.

ಸೆ.17ರ ಬೆಳಗ್ಗೆ 9ರಿಂದ 10ರವರೆಗೆ ನಡೆಯುವ ಯೋಗಥಾನ್‍ಗೆ ಜಿಲ್ಲೆಯ 50 ಸಾವಿರಕ್ಕೂ ಅಧಿಕ ಯೋಗಪಟುಗಳ ನೋಂದಣಿಯಾಗಬೇಕು, ಕೂಡಲೇ ನೋಂದಣಿ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು. ಜಿಲ್ಲೆಯ ಮೆಡಿಕಲ್, ಇಂಜಿನಿಯರಿಂಗ್, ನರ್ಸಿಂಗ್ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳನ್ನು ಈ ಯೋಗಥಾನ್‍ನಲ್ಲಿ ಭಾಗವಹಿಸಲು ಜಾಗೃತಿ ಮೂಡಿಸುವಂತೆ ಆಯಾ ಕಾಲೇಜುಗಳ ನೋಡಲ್ ಅಧಿಕಾರಿಗಳಿಗೆ ಸೂಚಿಸಬೇಕು. ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಆಗಬೇಕೆಂದು ಅವರು ಹೇಳಿದರು.

Edited By : Nagaraj Tulugeri
Kshetra Samachara

Kshetra Samachara

07/09/2022 01:04 pm

Cinque Terre

2.33 K

Cinque Terre

0

ಸಂಬಂಧಿತ ಸುದ್ದಿ