ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಬಿಜೆಪಿ ಯುವ ಮೋರ್ಚಾದಿಂದ ದರೆಗುಡ್ಡೆಯಲ್ಲಿ ಕೆಸರ್‌ಡೊಂಜಿ ಕಮಲದಿನ

ಮೂಡುಬಿದಿರೆ: ಬಿಜೆಪಿ ಯುವ ಮೋರ್ಚಾ ಮುಲ್ಕಿ ಮೂಡುಬಿದಿರೆ ಮಂಡಲದಿಂದ ದರೆಗುಡ್ಡೆಯ ಸಿರಿಸಂಪದ ಫಾರ್ಮ್‌ನಲ್ಲಿ ನಡೆದ "ಕೆಸರ್‌ಡೊಂಜಿ ಕಮಲದಿನ" ಕಾರ್ಯಕ್ರಮದ ಮೂಲಕ ಕೆಸರಿನಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳು, ಯುವಕರು, ಮಹಿಳೆಯರು ಮತ್ತು ಪುರುಷರು ಭಾಗವಹಿಸುವ ಮೂಲಕ ಒಂದು ದಿನವಿಡೀ ಕೆಸರಿನಲ್ಲಿಯೇ ಆಟವಾಡಿ ಗಮನ ಸೆಳೆದರು.

ಕಾರ್ಯಕ್ರಮವನ್ನು ಶಾಸಕ ಉಮಾನಾಥ ಎ.ಕೋಟ್ಯಾನ್ ದೀಪ ಬೆಳಿಗಿಸಿ, ತೆಂಗಿನ ಹಿಂಗಾರವನ್ನು ಅರಳಿಸುವ ಮೂಲಕ ಚಾಲನೆಯನ್ನು ನೀಡಿ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಮಕ್ಕಳನ್ನು ಸೇರಿಸಿ ಆಟ ಆಡಿಸುತ್ತಾ ಭಾರತ ದೇಶದ ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರಗಳನ್ನು ತಿಳಿಸಿ ಅಲ್ಲಿಂದ ದೇಶ ಪ್ರೇಮವನ್ನು ಅವರ ಮನದಲ್ಲಿ ಬಿತ್ತಿ ಅಲ್ಲಿಂದ ಧ್ಯಾನವನ್ನು ಸಂಪಾದಿಸಿ, ರಾಜಕೀಯವಾಗಿ, ರಾಷ್ಟ್ರೀಯ ಪಕ್ಷವಾಗಿ ಭಾರತೀಯ ಜನತಾ ಪಾರ್ಟಿ, ಜನ ಸಂಘವು ಹಿರಿಯ ಹಾಕಿದ ಹೆಜ್ಜೆಯಲ್ಲಿ ಬೆಳೆದು ನಿಂತಿದೆ. ಸಂಘಟನೆಯನ್ನು ಗಟ್ಟಿಗೊಳಿಸುವ ಕೆಲಸ ಮಾತ್ರವಲ್ಲದೆ ಜತೆ ಜತೆಗೆ ಒಂದಷ್ಟು ಆಟಗಳನ್ನು ಆಡುವ ಮೂಲಕ ಸಂಘಟನೆಯನ್ನು ಬಲಗೊಳಿಸುವ ಪ್ರಯತ್ನಗಳು ನಡೆಯುತ್ತವೆ.

ಅಲ್ಲದೆ ದೇಶದ ಆಚಾರ-ವಿಚಾರ, ಕೃಷಿ ಬದುಕಿನ ತಿಳಿಯಲು ಸಹಕಾರಿಯಾಗಲಿದೆ. ಈ ಹಿಂದೆ ತುಳು ಸಾಹಿತ್ಯ ಅಕಾಡೆಮಿಯಲ್ಲಿ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ "ಆಟಿಡೊಂಜಿ ದಿನ", "ಕೆಸರ್‌ಡೊಂಜಿ ದಿನ" ಮುಂತಾದ ಕಾರ್ಯಕ್ರಮಗಳಿಗೆ ಅನುದಾನವನ್ನು ನೀಡಿ ಪ್ರೋತ್ಸಾಹ ನೀಡಿರುವ ಬಗ್ಗೆ ನೆನಪಿಸಿಕೊಂಡರು.

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಮಂಡಲದ ಅಧ್ಯಕ್ಷ ಸುನೀಲ್ ಆಳ್ವ, ಹಿರಿಯ ಮುಖಂಡರುಗಳಾದ ಭುವನಾಭಿರಾಮ ಉಡುಪ, ರಮಾನಾಥ್ ಅತ್ತಾರ್, ಕೆ.ಪಿ.ಜಗದೀಶ ಅಧಿಕಾರಿ, ದಯಾನಂದ ಪೈ, ಕೆ.ಆರ್.ಪಂಡಿತ್, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಉಪಾಧ್ಯಕ್ಷೆ ಸುಜಾರ ಶಶಿಧರ್, ದರೆಗುಡ್ಡೆ ಗ್ರಾ.ಪಂ.ಅಧ್ಯಕ್ಷೆ ತುಳಸಿ ಮೂಲ್ಯ, ಉಪಾಧ್ಯಕ್ಷರು ಅಶೋಕ್ ಶೆಟ್ಟಿ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

05/07/2022 04:13 pm

Cinque Terre

4.58 K

Cinque Terre

0