ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವೈಭವೋಪೇತ ಕಾಂತಭಾರೆ-ಬೂದಭಾರೆ ಜೋಡುಕರೆ ಕಂಬಳದ ಗಮ್ಮತ್ತು

ಮಂಗಳೂರು: ಕರಾವಳಿಯಲ್ಲಿ ಕಂಬಳ ಕಲರವ ಜೋರಾಗಿದೆ.ಜಿಲ್ಲೆಯ ಅತೀ ವೈಭವೋಪೇತ ಕಂಬಳ ಎಂದೇ ಪ್ರಸಿದ್ಧಿಯಾಗಿರುವ ಐಕಳ ಕಾಂತಭಾರೆ-ಬೂದಭಾರೆ ಜೋಡುಕರೆ ಕಂಬಳ ಅದ್ಧೂರಿಯಾಗಿ ನಡೆಯಿತು.

46 ನೇ ವರ್ಷದ ಜೋಡುಕರೆ ಕಂಬಳ ಇದಾಗಿದ್ದು,ಬ್ರಿಟಿಷ್ ಕಾಲದಿಂದಲೂ ಇಲ್ಲಿ ಕಂಬಳ ನಡೆಯುತಿತ್ತು ಅನ್ನೋದು ವಿಶೇಷವಾಗಿದೆ.ಐಕಳ ಕಂಬಳ ಕೇವಲ ಕಂಬಳವಾಗಿ ಮಾತ್ರ ಉಳಿಯದೇ ತುಳುನಾಡಿನ ಜಾನಪದ ನಾಡು-ನುಡಿಯನ್ನು ಬೆಳೆಸುವ ಐಕಳೋತ್ಸವವಾಗಿ ಮೇಳೈಸಿದೆ.ಸುಮಾರು 230ಕ್ಕೂ‌ಅಧಿಕ ಜೊತೆ ಕೋಣಗಳು ಈ ಐಕಳ ಕಂಬಳದಲ್ಲಿ ಭಾಗವಹಿಸಿದ್ದು,ಸಾವಿರಾರು ಕಂಬಳಾಭಿಮಾನಿಗಳು ಕಂಬಳ ವೈಭವಕ್ಕೆ ಸಾಕ್ಷಿಯಾಗಿದ್ದರು.

ಐಕಳ ಕಂಬಳದ ಪ್ರಯುಕ್ತ ಸಹಕಾರಿ ಧುರೀಣ ಎಂ.ಎನ್ ರಾಜೇಂದ್ರ ಕುಮಾರ್,ಪದ್ಮಶ್ರೀ ವಿಜೇತರಾದ ಹರೇಕಳ ಹಾಜಬ್ಬ,ಅಮೈ ಮಹಾಲಿಂಗ ನಾಯ್ಕ ಅವರನ್ನು ಸನ್ಮಾನಿಸಲಾಯಿತು.ಆಕರ್ಷಕ ವಿದ್ಯುತ್ ದೀಪಾಲಂಕರದ ನಡುವೆ ನಡೆದ ಐಕಳ ಕಂಬಳ ಪ್ರತಿವರ್ಷದಂತೇ ಈ ಬಾರಿಯೂ ಜನರ ಮನಸೂರೆಗೊಳಿಸಿತು.

Edited By : Manjunath H D
Kshetra Samachara

Kshetra Samachara

27/02/2022 04:58 pm

Cinque Terre

21.96 K

Cinque Terre

1