ಮುಲ್ಕಿ: ಭಾರತ ಸರಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು ಸಂಯೋಜನೆಯಲ್ಲಿ ನೆಹರು ಯುವ ಕೇಂದ್ರದ ಸ್ಥಾಪನಾ ದಿವಸದ ಅಂಗವಾಗಿ ಕೇಂದ್ರ ಸರಕಾರ ಆಯೋಜಿಸಿರುವ ಫಿಟ್ ಇಂಡಿಯಾ ಅಭಿಯಾನದಡಿ ಹಳೆಯಂಗಡಿ ತೋಕೂರು ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಹಲವು ಕಾರ್ಯಕ್ರಮ ನಡೆಸಿದ್ದು, ಈ ನಿಟ್ಟಿನಲ್ಲಿ ನೆಹರು ಯುವ ಕೇಂದ್ರದ ಸಂಸ್ಥಾಪನೆ ದಿನಾಚರಣೆ ನಡೆಯಿತು.
ಈ ಸಂದರ್ಭ ಸ್ಪೋರ್ಟ್ಸ್ ಕ್ಲಬ್ ಗೆ ಸಾಮಾಜಿಕ ಚಿಂತಕ,
ಸಾಹಿತಿ ರಾಮಚಂದ್ರ ಬೈಕಂಪಾಡಿ ಪ್ರಮಾಣಪತ್ರ ವಿತರಿಸಿದರು.
ಕಾರ್ಪೊರೇಟರ್ ಲತೀಫ್,
ಕುದ್ರೋಳಿ ವಿಭಾಗದ
ಹನೀಫ್ ಮತ್ತು ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯ ಅಧಿಕಾರಿ ರಘುವೀರ್ ಸೂಟರ್ ಪೇಟೆ, ಲೆಕ್ಕಾಧಿಕಾರಿ ಜಗದೀಶ್ ಉಪಸ್ಥಿತರಿದ್ದರು.
ಸಂಸ್ಥೆ ಗೌರವ ಅಧ್ಯಕ್ಷ
ನಾರಾಯಣ ಜಿ.ಕೆ., ಕಾರ್ಯಕಾರಿ
ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ, ಉಪಾಧ್ಯಕ್ಷ ದೀಪಕ್ ಸುವರ್ಣ, ಕೋಶಾಧಿಕಾರಿ ಸಂಪತ್ ದೇವಾಡಿಗ, ಸಾಂಸ್ಕೃತಿಕ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಬೇಕಲ್ , ತಂಡದ ನಾಯಕ ಗೌರೀಶ್ ಬೆಲ್ಚಡ ಸದಸ್ಯರಾದ ಪದ್ಮನಾಭ ಶೆಟ್ಟಿ,ರಮೇಶ್, ವಿಪಿನ್ ಶೆಟ್ಟಿ,ಮಹಿಳಾ ಕಾರ್ಯಾಧ್ಯಕ್ಷೆ ವಾಣಿ ಮಹೇಶ್,ಸದಸ್ಯೆ ನೀಮಾ ಹಳೆಯಂಗಡಿ ಪಾಲ್ಗೊಂಡಿದ್ದರು.
ನೆಹರು ಯುವ ಕೇಂದ್ರದ ಮಂಗಳೂರು ಪ್ರತಿನಿಧಿ ಪ್ರಿತೇಶ್ ಸ್ವಾಗತಿಸಿದರು. ಪ್ರತಿನಿಧಿ ಪ್ರಜ್ವಲ್ ವಂದಿಸಿದರು.ಮೂಡುಬಿದ್ರಿ ವಲಯ ಪ್ರತಿನಿಧಿ ಸುಶ್ಮಿತ ಕುಲಾಲ್ ನಿರೂಪಿಸಿದರು. ದ.ಕ. ಜಿಲ್ಲಾ ವ್ಯಾಪ್ತಿಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಪ್ರತಿನಿಧಿಗಳಾಗಿ ಭಾಗವಹಿಸಿದರು.
Kshetra Samachara
16/11/2020 06:18 pm