ಮಣಿಪಾಲ: ಅಂತಾರಾಷ್ಟ್ರೀಯ ಜಾವ ಬೈಕ್ ಡೇ ಪ್ರಯುಕ್ತ ಉಡುಪಿಯ ಜಾವ ಎಸ್.ಡಿ ಮೋಟಾರ್ ಸೈಕಲ್ ಕ್ಲಬ್, ಪರ್ಕಳ ಹೈಸ್ಕೂಲ್ ಮೈದಾನದಲ್ಲಿ ಜಾವಾ ಡೇ ಹಮ್ಮಿಕೊಂಡಿತ್ತು. ಪ್ರದರ್ಶನದಲ್ಲಿ ಒಂದನ್ನೊಂದು ಮೀರಿಸುವ 40ಕ್ಕೂ ಹೆಚ್ಚು ಜಾವಾ ಬೈಕ್‌ಗಳು ಜನರನ್ನು ತಮ್ಮತ್ತ ಸೆಳೆದವು.
ಪ್ರದರ್ಶನಕ್ಕೆ ಬಂದಿದ್ದ ದಶಕಗಳ ಹಿಂದಿನ ಜಾವಾ ಮೋಟಾರ್ ಸೈಕಲ್‌ಗಳನ್ನು ಕಂಡು ಬೈಕ್ ಪ್ರಿಯರು ರೋಮಾಂಚನಗೊಂಡರು. ಜಾವಾ ಮೋಟಾರ್ ಸೈಕಲ್ ಗೆ ಸಂಬಂಧಿಸಿದಂತೆ ಅದರ ತಾಂತ್ರಿಕ ಮಾಹಿತಿ, ಚಾಲನೆಯ ಅನುಭವ, ವೈಶಿಷ್ಟ್ಯವನ್ನು ತಿಳಿದುಕೊಂಡರು. ಹೊರ ಜಿಲ್ಲೆಗಳಿಂದ ಬಂದಿದ್ದ ಸವಾರರು ಜಾವಾ ಜೊತೆಗಿನ ಅನುಭವವನ್ನು ಹಂಚಿಕೊಂಡರು.
ಉಡುಪಿಯ ಜಾವ ಎಸ್.ಡಿ ಮೋಟಾರ್ ಸೈಕಲ್ ಸಂಘಟನೆಯ ಮುಖ್ಯಸ್ಥ ರಿಚರ್ಡ್ ಮಾತನಾಡಿ 2016ರಲ್ಲಿ ಜಾವಾ ಕ್ಲಬ್ ಆರಂಭವಾಗಿದ್ದು, ಪ್ರತಿವರ್ಷ ನಿರ್ಧಿಷ್ಟ ಧ್ಯೇಯದೊಂದಿಗೆ ಅಂತಾರಾಷ್ಟ್ರೀಯ ಜಾವಾ ಬೈಕ್ ಡೇ ಆಚರಿಸಲಾಗುತ್ತಿದೆ. ದ್ವಿಚಕ್ರ ವಾಹನ ಸವಾರರಿಗೆ ಮಾರಣಾಂತಿಕವಾಗಿ ಕಾಡುತ್ತಿರುವ ಬ್ಲೈಂಡ್ ಸ್ಪಾಟ್‌ಗಳ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಳೆಯ ಕಾರಣದಿಂದ ಮುಂದೂಡಲಾಗಿದ್ದು, ಶೀಘ್ರವೇ ಹಮ್ಮಿಕೊಳ್ಳುತ್ತೇವೆ ಎಂದರು.
PublicNext
19/07/2022 09:15 am