ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲ್ಯಾಡಿ: ಚಾಲಕರ 'ನಿದ್ದೆಗೆಡಿಸುವ' ಕನ್ನಡಕ!; ವಿದ್ಯಾರ್ಥಿಯಿಂದ ವಿನೂತನ ಆವಿಷ್ಕಾರ

ನೆಲ್ಯಾಡಿ: ರಾತ್ರಿ ವೇಳೆ ಸಂಚರಿಸುವ ಘನ, ಲಘು ವಾಹನಗಳ ಚಾಲಕರು ಕೆಲಸದ ಒತ್ತಡದಿಂದಲೋ, ಇತರ ಕಾರಣಗಳಿಂದಲೋ ಚಾಲನೆ ಸಮಯದಲ್ಲಿ ನಿದ್ರೆಗೆ ಜಾರುವುದು ಸಾಮಾನ್ಯ.

ಇಂತಹ ಸಮಯ ಚಾಲಕರು ಎಚ್ಚರವಾಗಿರಲು ಎಳೆಯ ವಿದ್ಯಾರ್ಥಿಯೊಬ್ಬ ವಿಶೇಷ ಕನ್ನಡಕ ಆವಿಷ್ಕರಿಸಿದ್ದಾನೆ!

ಹೌದು, ಈತನ ಹೆಸರು ಚಿನ್ಮಯ್ ಗೌಡ. ನೆಲ್ಯಾಡಿಯ ಜ್ಞಾನೋದಯ ಬೆಥನಿ ಇಂಗ್ಲಿಷ್ ಮೀಡಿಯಂ ಶಾಲೆ 9ನೇ ತರಗತಿ ವಿದ್ಯಾರ್ಥಿ. ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಧರ್ಮದಗಳ ನಿವಾಸಿ ಚಂದ್ರಶೇಖರ- ಚೇತನಾ ದಂಪತಿ ಪುತ್ರ.

* ಏನಿದರ ವಿಶೇಷತೆ: ಈ ಕನ್ನಡಕವನ್ನು ಹಾಕಿಕೊಂಡರೆ ನಿದ್ದೆ ಸಮಸ್ಯೆ ಇರುವುದಿಲ್ಲ. ನೋಡಲು ಇದೊಂದು ಸಾಮಾನ್ಯ ಕನ್ನಡಕ. ಆದರೆ, ಇದನ್ನು ಧರಿಸಿ ನೀವೇನಾದರೂ 2 ಸೆಕೆಂಡ್ ಕಣ್ಣುರೆಪ್ಪೆ ಮುಚ್ಚಿಕೊಂಡರೆ ಅಲಾರಾಂನಂತೆ ಜೋರಾಗಿ ಬಝರ್ ನಂತೆ ಬೀಪ್ ಸದ್ದು ಆಗುವುದರ ಜೊತೆಗೆ ಎರಡೂ ಕಣ್ಣಿನ ಬಳಿಯೂ ವೈಬ್ರೇಟ್ ಆಗಲು ಆರಂಭಿಸುತ್ತದೆ.

ಮುಚ್ಚಿದ ಕಣ್ಣುರೆಪ್ಪೆ ತೆರೆಯುವ ತನಕ ಈ ಶಬ್ದ ಮತ್ತು ವೈಬ್ರೇಟ್ ನಿಲ್ಲುವುದಿಲ್ಲ. ಸಾಮಾನ್ಯ ಕನ್ನಡಕಕ್ಕೆ ಕೂಲಿಂಗ್ ಗ್ಲಾಸ್, ಐ ಬಂಕ್ ಸೆನ್ಸಾರ್ ಮತ್ತು ಆರ್ಡಿನೊ ನ್ಯಾನೊ ಚಿಪ್, ಮಿನಿ ಸೌಂಡ್ ಬಝರ್, ವೈಬ್ರೇಟರ್, ಮತ್ತು 9 ವ್ಯಾಟ್‌ನ ಚಿಕ್ಕ ಬ್ಯಾಟರಿ, ಇತರ ಕೆಲವು ಎಲೆಕ್ಟ್ರಾನಿಕ್ ವಸ್ತು ಬಳಸಿ ಈ ಸಾಧನ ತಯಾರಿಸಲಾಗಿದೆ. ಪ್ರಸ್ತುತ ಈ ಸಾಧನವನ್ನು ಕನ್ನಡಕಕ್ಕೆ ಜೋಡಿಸಲಾಗಿದೆ. ಇದನ್ನೇ ಇನ್ನಷ್ಟು ವಿನ್ಯಾಸಗೊಳಿಸಿ, ಕನ್ನಡಕ ಇಲ್ಲದೆ ಕೇವಲ ಸಾಧನವನ್ನು ಮಾತ್ರ ಕಣ್ಣಿನ ಪಕ್ಕದಲ್ಲಿ ಧರಿಸುವ ವ್ಯವಸ್ಥೆ ಮಾಡಿದರೆ ಕನ್ನಡಕ ಇಷ್ಟಪಡದವರಿಗೂ ಉಪಯುಕ್ತವಾದೀತು ಎನ್ನುತ್ತಾನೆ ಚಿನ್ಮಯ್.

Edited By : Nagesh Gaonkar
Kshetra Samachara

Kshetra Samachara

01/11/2021 10:14 pm

Cinque Terre

26.32 K

Cinque Terre

0