ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬಾನಂಗಳದಲ್ಲಿ ಮಿಂಚಲಿದ್ದಾಳೆ ಕುಡ್ಲದ ಬಾಲೆ; ಏರ್‌ಫೋರ್ಸ್ ಫ್ಲೈಯಿಂಗ್ ಬ್ರಾಂಚ್‌ಗೆ ಮನಿಷಾ ಆಯ್ಕೆ

ಮಂಗಳೂರು: ತಂದೆಗೆ ಸೈನ್ಯಕ್ಕೆ ಸೇರುವ ಕನಸಿತ್ತು. ಆದರೆ, ಅದು ಕಾರಣಾಂತರಗಳಿಂದ ಸಾಧ್ಯವಾಗಿಲ್ಲ. ಆ ಬಯಕೆಯನ್ನು ಇದೀಗ ಪುತ್ರಿ ಪೂರೈಸಿದ್ದಾಳೆ‌. ಹೌದು, ಇದು ಲೋಹದ ಹಕ್ಕಿ (ವಿಮಾನ)ಯ ಹಾರಾಟಕ್ಕೆ ಭಾರತೀಯ ವಾಯುಸೇನೆಯ ಪೈಲಟ್ ಆಗುವತ್ತ ಹೆಜ್ಜೆಯಿಟ್ಟ ಕುಡ್ಲದ ಬಾಲೆಯ ಕಥೆ.

ಈಗಾಗಲೇ ಮಂಗಳೂರಿನ ಈ ಧೀರೆ ಮನಿಷಾ ಶೆಟ್ಟಿ ದುಂಡಿಗಲ್ ಗೆ ತೆರಳಿದ್ದಾರೆ. ಈಕೆ ಏರ್‌ಫೋರ್ಸ್ ಫ್ಲೈಯಿಂಗ್ ಬ್ರಾಂಚ್‌ಗೆ ಆಯ್ಕೆಯಾಗಿರುವ ರಾಜ್ಯದ ಏಕೈಕ ಕುವರಿ. ತೆಲಂಗಾಣದ ದುಂಡಿಗಲ್‌ನ ಏರ್‌ಫೋರ್ಸ್ ಅಕಾಡೆಮಿಯಲ್ಲಿ ಜು.9ರಿಂದ ತರಬೇತಿ ಪಡೆಯುತ್ತಿದ್ದಾರೆ.‌ ಮನಿಷಾ ತಂದೆ ಮನೋಹರ್ ಶೆಟ್ಟಿ ಈ ಹಿಂದೆ ವಾಯುಪಡೆಗೆ ಆಯ್ಕೆಯಾಗಿದ್ದರು. ಆದರೆ, ಅವರ ಸಹೋದರ ಏರ್ ಫೋರ್ಸ್ ನಲ್ಲಿದ್ದ ಕಾರಣ ಮನೋಹರ್ ಅವರಿಗೆ ಅವಕಾಶ ಲಭ್ಯವಾಗಿಲ್ಲ. ಆದ್ದರಿಂದ

ತನ್ನಿಬ್ಬರು ಮಕ್ಕಳಲ್ಲಿ ಒಬ್ಬರನ್ನಾದರೂ ಪೈಲಟ್ ಮಾಡಬೇಕೆಂಬ ಕನಸು ಅವರಿಗಿತ್ತು. ಇದಕ್ಕಾಗಿ ಬಾಲ್ಯದಿಂದಲೇ ಇಬ್ಬರು ಮಕ್ಕಳ ಚಲನವಲನ, ಆಸಕ್ತಿ ಗಮನಿಸಿ ಮನಿಷಾರನ್ನು ಸೇನೆಗೆ ಸೇರುವಂತೆ ಪ್ರೋತ್ಸಾಹಿಸಿದ್ದರು.

ಏರ್ ಫೋರ್ಸ್‌ಗೆ ಆಯ್ಕೆ 6 ತಿಂಗಳ ಪ್ರಕ್ರಿಯೆಯಾಗಿದ್ದು, ಪ್ರಾರಂಭದಲ್ಲಿ ಏರ್‌ ಪೋರ್ಸ್ ಕಾಮನ್ ಎಂಟ್ರೆನ್ಸ್ ಪರೀಕ್ಷೆ ಬರೆಯಬೇಕು. ದೇಶದ 5 ಕೇಂದ್ರಗಳಲ್ಲಿ (ಮೈಸೂರು, ಗುಜರಾತ್, ಗುವಾಹಟಿ, ವಾರಣಾಸಿ, ಡೆಹ್ರಾಡೂನ್) ಪರೀಕ್ಷೆ ನಡೆದಿದ್ದು, ಇದರಲ್ಲಿ ನಿಯಮಿತ ಅಂಕ ತೆಗೆಯಬೇಕು. ಈ ಪರೀಕ್ಷೆಯಲ್ಲಿ 250 ವಿದ್ಯಾರ್ಥಿನಿಯರು ವಾಯುಪಡೆಗೆ ಪರೀಕ್ಷೆ ಬರೆದಿದ್ದು, 59 ಮಂದಿ ಎರಡನೇ ಹಂತಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಒಂದು ವಾರ ವಿವಿಧ ಪರೀಕ್ಷೆ ನಡೆಸಿ ಮತ್ತೊಂದು ಹಂತಕ್ಕೆ 15 ಮಂದಿ ಆಯ್ಕೆಯಾಗಿದ್ದಾರೆ. ಇದಾದ ಬಳಿಕ ಕಠಿಣ ದೈಹಿಕಾ ಕ್ಷಮತಾ ಪರೀಕ್ಷೆ (ಮೆಡಿಕಲ್ ಟೆಸ್ಟ್) ನಡೆಯುತ್ತದೆ. ಇವರಲ್ಲಿ ಐವರನ್ನು ಪೈಲಟ್ ಗೆ ಆಯ್ಕೆ ಮಾಡಿದ್ದು, ಅದರಲ್ಲಿ ಮನಿಷಾ ಸೇರಿದಂತೆ ಮೂವರು ಆಯ್ಕೆಯಾಗಿದ್ದಾರೆ. ಉಳಿದಿಬ್ಬರು ಲಕ್ನೋ ಮತ್ತು ದಿಲ್ಲಿಯವರು.

ಸಾಮಾನ್ಯವಾಗಿ ಏರ್‌ಪೋರ್ಸ್ ಆಯ್ಕೆಯಾಗಬೇಕಾದರೆ ಕೋಚಿಂಗ್ ಪಡೆಯುತ್ತಾರೆ. ಆದರೆ, ಮನಿಷಾ ಯಾವುದೇ ತರಬೇತಿ ಪಡೆಯದೆ ತಂದೆಯ ಮಾರ್ಗದರ್ಶನ ಪಡೆದು ಯೂಟ್ಯೂಬ್‌ನಿಂದಲೇ ಮಾಹಿತಿ ಸಂಗ್ರಹಿಸುತ್ತಿದ್ದರು. ಜತೆಗೆ ದೊಡ್ಡಪ್ಪ ಯಶವಂತ್ ಶೆಟ್ಟಿ ಕೂಡ ಮನಿಷಾ ಪ್ರಯತ್ನಕ್ಕೆ ಬೆಂಗಾವಲಾಗಿದ್ದರು.

Edited By : Nagesh Gaonkar
PublicNext

PublicNext

10/07/2022 03:23 pm

Cinque Terre

60.34 K

Cinque Terre

7