ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಪರಿಸರದಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ

ಮುಲ್ಕಿ: ಮುಲ್ಕಿ ಪರಿಸರದಲ್ಲಿ ಮುಸ್ಲಿಂ ಬಾಂಧವರಿಂದ ಈದ್ ಮಿಲಾದ್ ಆಚರಣೆ ವಿಜೃಂಭಣೆಯಿಂದ ನಡೆಯಿತು. ಮುಲ್ಕಿ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಮಸೀದಿಯ ಗುರುಗಳಿಂದ ವಿಶೇಷ ಪ್ರಾರ್ಥನೆ ನಡೆಯಿತು.

ಪ್ರವಾದಿ ಜನ್ಮದಿನ ಪ್ರಯುಕ್ತ ಹಳೆಯಂಗಡಿ ಬೊಳ್ಳೂರು ಮುಹಿಯುದ್ದೀನ್ ಜುಮ್ಮಾ ಮಸೀದಿ ವತಿಯಿಂದ ಈದ್ ಮಿಲಾದ್ ಮೆರವಣಿಗೆ ನಡೆಯಿತು.

ಧರ್ಮ ಗುರು ಹಾಜಿ ಅಲ್ ಅಝ್ಹರ್ ಫೈಝಿ ರವರು ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು. ದಾರುಲ್ ಉಮಾ ಮದರಸದ ಮುಖ್ಯೋಪಾಧ್ಯಾಯ ನಾಸೀರ್ ಮುಸ್ಲಿಯಾರ್ ಹಾಗೂ ಅಧ್ಯಾಪಕ ಆರಿಫ್ ಬಾಖವಿ ನೇತೃತ್ವದಲ್ಲಿ ಈದ್ ಮಿಲಾದ್ ಮೆರವಣಿಗೆ ನೆರವೇರಿತು. ಮುಲ್ಕಿ ಪರಿಸರದ ಗುತ್ತಗಾಡು, ಅಂಗಾರಗುಡ್ಡೆ, ಕದಿಕೆ, ಪಕ್ಷಿಕೆರೆ, ಪುನರೂರು, ಮಸೀದಿಗಳಲ್ಲಿ ಸಮಸ್ತ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಮೆರವಣಿಗೆ ನಡೆಯಿತು. ಮುಲ್ಕಿ ಪೊಲೀಸರು ಅಲ್ಲಲ್ಲಿ ಬಿಗು ಬಂದೋಬಸ್ತು ಏರ್ಪಡಿಸಿದ್ದರು.

Edited By : Shivu K
Kshetra Samachara

Kshetra Samachara

09/10/2022 12:29 pm

Cinque Terre

3.98 K

Cinque Terre

0