ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮುಸ್ಲಿಂ ಬಾಂಧವರಿಂದ ಮೀಲಾದುನ್ನಬಿ ಆಚರಣೆ; ರ‍್ಯಾಲಿ, ಸಾಮೂಹಿಕ ಪ್ರಾರ್ಥನೆ

ಉಡುಪಿ: ಇವತ್ತು ಎಲ್ಲೆಡೆ ಮುಸ್ಲಿಂ ಬಾಂಧವರಿಗೆ ಈದ್-ಮಿಲಾದ್- 20222 ಸಡಗರ. ಇಸ್ಲಾಂನ ಅಂತಿಮ ಪ್ರವಾದಿ ಹಜರತ್ ಮುಹಮ್ಮದ್ ಜನಿಸಿದ ದಿನ. ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಸಮುದಾಯದ ಜನರು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.

ಪ್ರವಾದಿ ಮುಹಮ್ಮದ್ ಜನ್ಮದಿನದ ವಿಶೇಷ ಸಂದರ್ಭದಲ್ಲಿ ಹಲವು ಮದರಸಾ ಮತ್ತು ಮಸೀದಿಗಳಲ್ಲಿ ಮೆರವಣಿಗೆಗಳು ,ರ‍್ಯಾಲಿ ನಡೆಯಿತು. ಉಡುಪಿಯ ದೊಡ್ಡಣಗುಡ್ಡೆ ಮಸೀದಿಯಲ್ಲಿ ಮಿಲಾದ್ ರ್ಯಾಲಿ ಮತ್ತು ಮಸೀದಿಯಲ್ಲಿ ಪ್ರಾರ್ಥನೆ ಸಂಪನ್ನಗೊಂಡಿತು. ಮಸೀದಿಯನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಹಬ್ಬದ ಸಡಗರ ಮನೆ ಮಾಡಿದೆ.

ಇದರೊಂದಿಗೆ ಮಸೀದಿಯಲ್ಲಿ ಪವಿತ್ರ ಕುರಾನ್ ಪಾರಾಯಣ,ಮೌಲೂದ್ ಪಾರಾಯಣ ಮತ್ತು ಸಾಮೂಹಿಕ ಪ್ತಾರ್ಥನೆ ನೆರವೇರಿತು.ಈದ್ ಪ್ರಯುಕ್ತ ಮಸೀದಿಯಲ್ಲಿ ಅನ್ನಪ್ರಸಾದದ ವ್ಯವಸ್ಥೆಯಿದ್ದು ನೂರಾರು ಬಾಂಧವರು ಭಾಗಿಯಾಗಿದ್ದಾರೆ.

ಈದ್ ಮಿಲಾದ್ ಪ್ರಯುಕ್ತ ಮದರಸಾ ವಿದ್ಯಾರ್ಥಿಗಳಿಗಾಗಿ ಹಾಡು ಮತ್ತು ಪ್ರವಾದಿ ಸಂದೇಶ ಭಾಷಣಗಳನ್ನು ಅಯೋಜಿಸಲಾಗಿತ್ತು.ಹತ್ತಾರು ಮಕ್ಕಳು ಪ್ರವಾದಿ ಮುಹಮ್ಮದ್ ಜೀವನ ಸಂದೇಶ ಕುರಿತ ಹಾಡು ಮತ್ತು ಭಾಷಣದಲ್ಲಿ ಪಾಲ್ಗೊಂಡರು.ಮಸೀದಿಯ ಖತೀಬರ ನೇತೃತ್ವದಲ್ಲಿ ಮೌಲೂದ್ ಮತ್ತು ಸಾಮೂಹಿಕ ಪ್ರಾರ್ಥನೆ ನಡೆಯಿತು.

Edited By : Shivu K
Kshetra Samachara

Kshetra Samachara

09/10/2022 12:14 pm

Cinque Terre

8.14 K

Cinque Terre

0

ಸಂಬಂಧಿತ ಸುದ್ದಿ