ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ದೇವಸ್ಥಾನಕ್ಕೆ ದಾಖಲೆಯ ಭಕ್ತಸಾಗರ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಮೂಲನಕ್ಷತ್ರದ ದಿನವಾದ ಭಾನುವಾರ ಶುಕ್ರವಾರದ ಲಲಿತಾ ಪಂಚಮಿಯನ್ನೂ ಮೀರಿಸಿದ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದು, ಸರತಿ ಸಾಲಿನಲ್ಲಿ ದೇವರ ದರ್ಶನಕ್ಕೆ ನಿಲ್ಲಲು ಕಷ್ಟವಾಗುವ ಭಕ್ತರಿಗೆ ಇದೇ ಮೊದಲ ಬಾರಿಗೆ ರೂ. 100ಕ್ಕೆ ಶೀಘ್ರ ದರ್ಶನವನ್ನು ಆರಂಭಿಸಲಾಗಿದೆ.

ಶುಕ್ರವಾರ 1200 ಮಂದಿ ಭಾನುವಾರ ಸುಮಾರು 20,000 ಮಂದಿ ಇದನ್ನು ಬಳಸಿದ್ದು, ದೇಗುಲಕ್ಕೆ 50ಸಾವಿರಕ್ಕೂ ಮಿಕ್ಕಿ ಭಕ್ತರು ಭೇಟಿ ನೀಡಿದ್ದಾರೆ.

ಶುಕ್ರವಾರ 8100 ಹೂವಿನ ಪೂಜೆಗಳು ಆಗಿದ್ದು ಈ ಸಂಖ್ಯೆ ದಾಖಲೆಯಾಗಿದ್ದು, ಭಾನುವಾರ ಸಂಜೆ ವೇಳೆಗೆ 6,500ಕ್ಕೂ ಮಿಕ್ಕಿ ಹೂವಿನ ಪೂಜೆಗಳಾಗಿವೆ.

ದೇಗುಲದಲ್ಲಿ ದಿನವಿಡೀ ಭಜನೆ, ಅದಿತ್ಯ ಜಿ.ಎಸ್. ಅವರಿಂದ ಭರತನಾಟ್ಯ ಕಟೀಲು ಮೇಳದ ಕಲಾವಿದರಿಂದ ಯಕ್ಷಗಾನ, ಸಂದೀಪ್ ಫಲಿಮಾರು ಅವರಿಂದ ಸ್ಯಾಕ್ಸೋಫೋನ್ ವಾದನ ನಡೆಯಿತು. ಕಟೀಲು ಶಿಕ್ಷಣ ಸಂಸ್ಥೆಗಳ ಸಿಬಂದಿಗಳು, ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಶ್ರಮಿಸಿದರು.

Edited By : Nagaraj Tulugeri
PublicNext

PublicNext

03/10/2022 03:20 pm

Cinque Terre

14 K

Cinque Terre

0

ಸಂಬಂಧಿತ ಸುದ್ದಿ