ಕುಂದಾಪುರ: ಮಾಂಸಾಹಾರ ಕುರಿತ ಆರ್ ಎಸ್ ಎಸ್ ವರಿಷ್ಠ ಮೋಹನ್ ಭಾಗವತ್ ಹೇಳಿಕೆಗೆ ಕುಂದಾಪುರದಲ್ಲಿ ಪ್ರತಿಕ್ರಿಯೆ ನೀಡಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಆಧ್ಯಾತ್ಮಿಕತೆ- ಸಾತ್ವಿಕತೆ ದೃಷ್ಟಿಯಿಂದ ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಒಪ್ಪಿಕೊಳ್ಳ ಬಹುದು. ಆದರೆ, ನಮ್ಮ ದೇಶದಲ್ಲಿ ಹಿಂದೂಗಳು ಮೆಜಾರಿಟಿ ಮಾಂಸಾಹಾರಿಗಳಿದ್ದಾರೆ.
ಹಾಗಾಗಿ ಒಳ್ಳೆಯದಲ್ಲ ಎಂದು ಆಧ್ಯಾತ್ಮಿಕ ಸಾತ್ವಿಕ ಮಾನಸಿಕ ದೃಷ್ಟಿಯಿಂದ ಹೇಳಿದ್ದಾರೆ. ಆದರೆ, ಆಹಾರದ ದೃಷ್ಟಿಯಿಂದ ಆ ಹೇಳಿಕೆ ಸರಿಯಲ್ಲ. ಆ ಹೇಳಿಕೆಯನ್ನು ಒಪ್ಪಲಾಗದು ಎಂದರು.
ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಪಾಲನೆ ಮಾಡುವುದು ನನ್ನ ದೃಷ್ಟಿಯಲ್ಲಿ ಸರಿ ಇದೆ ಎಂದ ಮುತಾಲಿಕ್ , ಧಾರ್ಮಿಕ ವಿಧಿ ವಿಧಾನಗಳಂತೆ ಏನು ನೀತಿ ನಿಯಮಗಳಿವೆ ಅದನ್ನು ಪಾಲಿಸಬೇಕು. ದೇವಸ್ಥಾನ ಪವಿತ್ರ ಸ್ಥಳ. ಅಂತಹ ಧಾರ್ಮಿಕ ಸ್ಥಳಗಳಿಗೆ ಬೇಕಾದ ಹಾಗೆ ಹೋಗುವುದು ಸರಿಯಲ್ಲ. ಭಕ್ತಿ ಭಾವನೆ ಬೆಳೆಸುವ ದೃಷ್ಟಿಯಿಂದ ವಸ್ತ್ರ ಸಂಹಿತೆ ಸರಿ ಇದೆ.
ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹೋಗಬೇಕಾದರೆ ಬರಿಗಾಲಿನಲ್ಲಿ ಕಾಡಿನಲ್ಲಿ 40 ಕಿಮೀ ನಡೆದು ಹೋಗುತ್ತಾರೆ. ಅಲ್ಲಿಗೆ ಹೋಗಲು ಅದರದೇ ಆದ ನಿಯಮಗಳಿವೆ. ಹಾಗಾಗಿ ಅಲ್ಲಿಯ ನಿಯಮ ಪಾಲಿಸಿಯೇ ಹೋಗಬೇಕು. ದೇವಸ್ಥಾನಗಳಲ್ಲಿ ಏನು ನಿಯಮ ಇದೆಯೋ ಅದು ಪಾಲನೆ ಆಗಬೇಕು ಎಂದು ಹೇಳಿದರು.
ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಧರ್ಮ ಪತ್ನಿಗೆ ನೌಕರಿ ನೀಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮುತಾಲಿಕ್,
ಸಿಎಂ ಅವರ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇರೆಗೆ ಕೆಲಸ ನೀಡಲಾಗಿದೆ. ಆದರೆ,
ನೆಟ್ಟಾರು ಅವರ ಪತ್ನಿಗೆ ಸಮೀಪದ ಪುತ್ತೂರಿನಲ್ಲಿ ಕೆಲಸ ನೀಡಿದರೆ ಉತ್ತಮ. ಅಲ್ಲದೆ, ಈಗ ನೀಡಿರುವ ಉದ್ಯೋಗ ಗುತ್ತಿಗೆ ಆಧಾರದ್ದು. ಇಲ್ಲಿ ಉದ್ಯೋಗ ಭದ್ರತೆ ಇಲ್ಲ. ಅವರಿಗೆ ಅಭದ್ರತೆ ಕಾಡದ ಹಾಗೆ ಖಾಯಂ ನೌಕರಿ ನೀಡುವ ಕೆಲಸವಾಗಬೇಕಿದೆ ಎಂದರು.
PublicNext
01/10/2022 04:48 pm