ಕೊಲ್ಲೂರು: ದಕ್ಷಿಣದ ಶಕ್ತಿಪೀಠ ಎಂದೇ ಖ್ಯಾತಿಗೊಂಡ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಬವರಾತ್ರಿ ಹಬ್ಬಕ್ಕೆ ದಿನಗಣನೆ ಪ್ರಾರಂಭಗೊಂಡಿದೆ.ಸೆ.26ರಿಂದ ದೇವಸ್ಥಾನದಲ್ಲಿ ಮಹಾನವರಾತ್ರಿ ಉತ್ಸವಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ.
ಸಂಪೂರ್ಣ ಹೊಸ ವಿನ್ಯಾಸಗಳಿಂದ ಕೂಡಿದ ಪುಷ್ಪಾಲಂಕಾರ ಹಾಗೂ ವಿದ್ಯುದ್ದೀಪಗಳಿಂದ ದೇವಳ ಅಲಂಕೃತಗೊಂಡಿದೆ.ಅ.4ರ ಮಹಾನವಮಿಯಂದು ಬೆಳಗ್ಗೆ 11.30ಕ್ಕೆ ಚಂಡಿಕಾಯಾಗ, ಅಪರಾಹ್ನ 1.05ಕ್ಕೆ ಧನುರ್ಲಗ್ನ ಮುಹೂರ್ತದಲ್ಲಿ ಪುಷ್ಪ ರಥೋತ್ಸವ ನಡೆಯಲಿದೆ. ಅ.5ರ ವಿಜಯದಶಮಿಯಂದು ಬೆಳಗ್ಗೆ 4ರಿಂದ ವಿದ್ಯಾರಂಭ, ಅಪರಾಹ್ನ ನವಾನ್ನಪ್ರಾಶನ, ಸಂಜೆ 5.30ಕ್ಕೆ ಶ್ರೀ ಮೂಕಾಂಬಿಕೆಯ ರಥೋತ್ಸವ ಜರುಗಲಿದೆ.
ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.ಮೂಕಾಂಬಿಕೆಯ ದರ್ಶನ ಪಡೆಯಲು ಹಾಗೂ ಸೇವೆಗಾಗಿ ರಾಜ್ಯ, ಹೊರರಾಜ್ಯ, ದೇಶ-ವಿದೇಶದಿಂದ ಆಗಮಿಸುವ ಲಕ್ಷಾಂತರ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ದೇವಳದ ಆಡಳಿತ ಮಂಡಳಿ ಮತ್ತು ವ್ಯವಸ್ಥಾಪನಾ ಸಮಿತಿ ವತಿಯಿಂದ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ದೇವಳದ ಸಿಬ್ಬಂದಿ, ಗ್ರಾಮಸ್ಥರು, ಸ್ಥಳೀಯಾಡಳಿತ, ಕಂದಾಯ, ಅರಣ್ಯ ಹಾಗೂ ಆರೋಗ್ಯ ಇಲಾಖೆ ಉತ್ಸವದ ಕುರಿತು ವಿಶೇಷ ಕಾಳಜಿ ವಹಿಸಿದ್ದಾರೆ.
Kshetra Samachara
24/09/2022 09:37 pm