ಧರ್ಮಸ್ಥಳ : ಸಂಸ್ಕಾರವನ್ನು ಉಳಿಸಲು ಭಜನಾ ಸಹಕಾರಿ. ಸಂಸ್ಕೃತಿ ಎನ್ನುವುದು ಶ್ರೇಷ್ಠ ಧರ್ಮ. ಹಿಂದೂ ಧರ್ಮವನ್ನು ನಾವು ರಕ್ಷಣೆ ಮಾಡಬೇಕಾಗಿದೆ. ಧರ್ಮ ವ್ಯಕ್ತಿತ್ವ, ಸಂಸ್ಕೃತಿ, ರಕ್ಷಣೆ ನೀಡುತ್ತದೆ. ಹೀಗಾಗಿ ನಾವು ಧರ್ಮವನ್ನು ಸಂರಕ್ಷಿಸಬೇಕಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ನಡೆದ 24 ನೇ ವರ್ಷದ ಭಜನಾ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು ಭಗವಂತನನ್ನು ಹತ್ತಿರ ಇಟ್ಟುಕೊಳ್ಳಿ. ದೇವರನ್ನು ನೀವು ಆತ್ಮೀಯರನ್ನಾಗಿ ಮಾಡಬೇಕು. ಸ್ತುತಿ ಮಾಡಿ ದೇವರನ್ನು ಓಲೈಸಬೇಕು. ಭಜನೆ ಮಾಡುವ ಮೂಲಕ ದೇವರನ್ನು ಹತ್ತಿರ ಮಾಡಬಹುದು. ಇನ್ನು ಮುಂದೆ ಭಜನಗಳೇ ಹೆಚ್ಚಾಗಲಿ. ಹುಚ್ಚೆದ್ದು ಕುಣಿಯುವುದರ ಬದಲು ಸಂಸ್ಕೃತಿಯನ್ನು ಉಳಿಸುವ ಭಜನಾ ಕುಣಿತ ಹೆಚ್ಚಾಗಲಿ. ನಾವೆಲ್ಲಾ ಸಂಸ್ಕಾರಪೂರ್ವ ಚಟುವಟಿಕೆಗಳಿಗೆ ಒತ್ತು ನೀಡೋಣ ಎಂದರು.
PublicNext
23/09/2022 06:35 pm