ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಸೇವೆಗಳಲ್ಲಿ ಒಂದಾಗಿರುವ ಸರ್ಪ ಸಂಸ್ಕಾರ ಸೇವಾ ದರವನ್ನು ಪರಿಷ್ಕರಿಸಲಾಗಿದೆ. ಈ ಮೊದಲು 3,200 ರೂಪಾಯಿ ಇದ್ದ ಸರ್ಪ ಸಂಸ್ಕಾರ ಸೇವೆಯ ದರವನ್ನು 4,200ಕ್ಕೆ ಹೆಚ್ಚಿಸಲಾಗಿದೆ. ಈ ಮೂಲಕ ಸರ್ಪ ಸಂಸ್ಕಾರ ದರದಲ್ಲಿ ಒಂದು ಸಾವಿರ ಹೆಚ್ಚಿಸಲಾಗಿದೆ. ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಯ ದೇವಳದಿಂದ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಲಾಗಿದೆ.
ಈ ಹಿಂದಿನ ಸೇವಾ ದರದಲ್ಲಿಯೇ ಹಲವು ದೇವಸ್ಥಾನದ ಹೊರತಾಗಿಯೂ ಹಲವು ಕಡೆ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ ಸೇವೆ ನಡೆಯುತ್ತಿತ್ತು. ನಾಗ ದೋಷ ನಿವಾರಣೆಗೆ ದೇಶದ ಹಲವಾರು ಮಂದಿ ಸರ್ಪಸಂಸ್ಕಾರ, ಆಶ್ಲೇಷ ಬಲಿ ಪೂಜೆಯನ್ನು ನೆರವೇರಿಸುತ್ತಾರೆ. ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಕುಕ್ಕೆ ಸುಬ್ರಹ್ಮಣ್ಯ ಭೇಟಿ ನೀಡಿ ಸರ್ಪಸಂಸ್ಕಾರ ಸೇವೆ ಮಾಡಿಸಿದ ಬಳಿಕ ದೇಶದಾದ್ಯಂತ ಕುಕ್ಕೆ ಸುಬ್ರಹ್ಮಣ್ಯದ ಸರ್ಪಸಂಸ್ಕಾರ ಸೇವೆ ಮತ್ತಷ್ಟು ವ್ಯಾಪಕವಾಗಿ ಪ್ರಚಾರವಾಗಿತ್ತು.
ಸರ್ಪ ಹತ್ಯೆ ದೋಷ ಇದ್ದವರು ಮಾತ್ರವೇ ಈ ಹಿಂದೆ ಈ ಸೇವೆ ಮಾಡುತ್ತಿದ್ದರೂ ಈಚೆಗೆ ಎಲ್ಲಾ ಭಕ್ತರೂ ದೋಷ ನಿವಾರಣೆಗಾಗಿ ಸರ್ಪಸಂಸ್ಕಾರ ನಡೆಸುತ್ತಿದ್ದಾರೆ. ಆಶ್ಲೇಷ ಬಲಿ ಪೂಜೆಯು ಸುಮಾರು 10 ವರ್ಷಗಳ ಹಿಂದೆ ಸರ್ಪದೋಷ ನಿವಾರಣೆಗೆ ನಡೆಸುತ್ತಿದ್ದ ಸೇವೆಯಾಗಿತ್ತು. ಇದೀಗ ಸಾರ್ವತ್ರಿಕವಾಗಿ ಸರ್ಪಸಂಸ್ಕಾರ ನಡೆಸುವುದರಿಂದ ಕುಕ್ಕೆ ಸುಬ್ರಹ್ಮಣ್ಯದ ಹಲವು ಕಡೆಗಳಲ್ಲಿ ಖಾಸಗಿಯಾಗಿಯೂ ಸೇವೆಗಳು ನಡೆಯುತ್ತಿವೆ.
ಈಗ ಸೇವಾ ದರ ಹೆಚ್ಚಿರುವುದರಿಂದ ಖಾಸಗಿಯಾಗಿ ನಡೆಯುವ ಸೇವೆಗಳಿಗೆ ಹೆಚ್ಚಿನ ಮಹತ್ವ ನೀಡಿದಂತಾಗಿದೆ ಎಂದು ಭಕ್ತರು ಅಭಿಪ್ರಾಯ ಪಟ್ಟಿದ್ದಾರೆ.
Kshetra Samachara
23/09/2022 03:40 pm