ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಹಿಂದೂ-ಮುಸ್ಲಿಂ ಭಾವೈಕ್ಯತೆಯ ಕೈಪುಂಜಾಲು ದರ್ಗಾದಲ್ಲಿ ಸಫರ್ ಝಿಯಾರತ್ ಸಂಪನ್ನ

ಕಾಪು: ಹಿಂದೂ-ಮುಸ್ಲಿಂ ಭಾವೈಕ್ಯತೆಯ ಕ್ಷೇತ್ರ ಕೈಪುಂಜಾಲು ಸಯ್ಯದ್ ಅರಬಿ ವಲಿಯುಲ್ಲಾರವರ ದರ್ಗಾದಲ್ಲಿ ವರ್ಷಂಪ್ರತಿ ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಸಫರ್ ತಿಂಗಳ ಕೊನೆಯ ಬುಧವಾರ ನಡೆಯುವ ಸಫರ್ ಝಿಯಾರತ್ ಸಮಾರಂಭವು ಸಂಪನ್ನಗೊಂಡಿತು.

ಕಾಪು ಪೊಲಿಪು ಜಾಮಿಯಾ ಮಸೀದಿಯ ಆಡಳಿತಕ್ಕೊಳಪಟ್ಟಿರುವ ಸಯ್ಯದ್ ಅರಬಿ ವಲಿಯುಲ್ಲಾರವರ ದರ್ಗಾವು ಹಿಂದೂ- ಮುಸ್ಲಿಂ ಭಾವೈಕ್ಯದ ಕೇಂದ್ರವಾಗಿದೆ. ಇಲ್ಲಿನ ಜಾಗದ ಒಡೆತನವು ಹಿಂದೂಗಳಿಗೆ ಸೇರಿದ್ದು, ಜಾಗದ ಮಾಲೀಕರಾದ ನರೇಂದ್ರ ಶ್ರೀಯಾನ್ ಮತ್ತು ಗುಣವಂತ ಶ್ರೀಯಾನ್ ಹಾಗೂ ಕುಟುಂಬದವರ ಸಹಕಾರದೊಂದಿಗೆ ದಿ. ಎಚ್. ಮಹಮ್ಮದ್ ಅವರ ಮಗ ಸರ್ಫುರಾಜ್ ಅವರ ಉಸ್ತುವಾರಿಯಲ್ಲಿ ಈ ಬಾರಿ ಆಂತರಿಕ ಜೀರ್ಣೋದ್ಧಾರ ಕಾರ್ಯಗಳು ನಡೆದಿದ್ದವು.

ಪೊಲಿಪು ಜಾಮಿಯಾ ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷ ಎಚ್. ಅಬ್ದುಲ್ಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಫರ್ ಝಿಯಾರತ್ ಸಮಾರಂಭದ ಪ್ರಯುಕ್ತ ಕಾಪು ಖಾಝಿ ಅಲ್ ಹಾಜ್ ಪಿ.ಬಿ. ಅಹ್ಮದ್ ಮುಸ್ಲಿಯಾರ್ ಅವರು ದುಆ ನೆರವೇರಿಸಿದ್ದು ಪೊಲಿಪು ಜಾಮಿಯಾ ಮಸೀದಿಯ ಖತೀಬ ಮುಹಮ್ಮದ್ ಇರ್ಷಾದ್ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ, ಪುರಸಭಾ ಸದಸ್ಯರು, ಪೊಲಿಪು ಜಾಮಿಯಾ ಮಸೀದಿ ಆಡಳಿತ ಕಮಿಟಿ ಉಪಾಧ್ಯಕ್ಷ ರಜಬ್ ಹಾಜಿ ಮೊಯ್ದಿನ್, ಹಂಗಾಮಿ ಕಾರ್ಯದರ್ಶಿ ಅಮೀರ್ ಹಂಝ, ಕೋಶಾದಿಕಾರಿ ಮೊಯ್ದಿನ್ , ಸದಸ್ಯರಾದ ಇಂತಿಯಾಜ್ ಅಹಮದ್, ಇಲಿಯಾಜ್, ಸರ್ಫುರಾಜ್, ಶೇಖ್ ನಜೀರ್ ಮೊದಲಾದವರು ಪಾಲ್ಗೊಂಡಿದ್ದರು.

Edited By :
Kshetra Samachara

Kshetra Samachara

21/09/2022 10:41 pm

Cinque Terre

6.96 K

Cinque Terre

0

ಸಂಬಂಧಿತ ಸುದ್ದಿ