ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕನ್ಯಾರತಿ

ಬ್ರಹ್ಮಾವರ: ಶ್ರಾವಣ ಮಾಸದಲ್ಲಿ ಕರಾವಳಿಯ ಬಹುತೇಕ ದೇವಸ್ಥಾನಗಳಲ್ಲಿ ಸೋಣಾರತಿ ಸೇವೆಗಳಿದ್ದು, ಕನ್ಯಾ ಸಂಕ್ರಾಂತಿ ದಿನದಂದು ಮುಗಿಯುತ್ತದೆ. ಮರುದಿನ ಕನ್ಯಾ ಮಾಸದ ರಾತ್ರಿ ಕನ್ಯಾರತಿ ಎನ್ನುವ ವಿಷೇಶ ಪೂಜೆ ಬ್ರಹ್ಮಾವರ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿದೆ.

ಹಲವಾರು ಧಾರ್ಮಿಕ ಸೇವಾ ಕಾರ್ಯದಲ್ಲಿರುವ ಇಲ್ಲಿನ ಶ್ರೀ ಮಹಾಲಿಂಗೇಶ್ವರ ಗೆಳೆಯರ ಬಳಗ ಸಂಸ್ಥೆ ಈ ಸೇವೆಗೆ ಧಾರ್ಮಿಕವಾಗಿ ಮರುಹುಟ್ಟು ನೀಡಿದೆ. ದೇವರಿಗೆ 90 ಆರತಿಯಲ್ಲಿ ಏಕಾರತಿ, ಪಂಚಾರತಿ, 3 ನೆಲೆ, 5 ನೆಲೆ, 7 ನೆಲೆ, 11 ನೆಲೆ, ಮರದ ಹಲಗೆ ಆರತಿ, ಕೂರ್ಮಾರತಿ, ನೀಲಾಂಜನ ಹೀಗೆ ಅನೇಕ ಆರತಿಗಳನ್ನು ದೇವರಿಗೆ ಬೆಳಗಲಾಗುತ್ತದೆ.

4 ಲೀಟರ್ ದೀಪದ ಎಣ್ಣೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಬತ್ತಿಗಳನ್ನು ಹಾಕಲು 7 ಜನರಿಗೆ 2 ಗಂಟೆ ಅವಧಿ ಬೇಕಾಗುತ್ತದೆ. ಅರ್ಚಕರು ದೇವರಿಗೆ ಆರತಿ ಬೆಳಗಲು 1 ಗಂಟೆ ತಗಲುತ್ತದೆ. ಈ ವರ್ಷ ಸೆಪ್ಟೆಂಬರ್ 18ರಂದು ಭಾನುವಾರ ರಾತ್ರಿ ಅರ್ಚಕ ಅನಂತ ಪದ್ಮನಾಭ ಭಟ್ ನೇತೃತ್ವದಲ್ಲಿ ನಡೆದ ಈ ಆರತಿಯನ್ನು ನೂರಾರು ಭಕ್ತಾಧಿಗಳು ಆಗಮಿಸಿ ಕಣ್ಣು ತುಂಬಿಸಿಕೊಂಡರು. ಸಮಿತಿಯ ಅಧ್ಯಕ್ಷ ಶೇಕರ ದೇವಾಡಿಗನೇತೃತ್ವದಲ್ಲಿ ಇನ್ನಿತರ ಸದಸ್ಯರು ಸಹಕರಿಸಿದ್ದರು.

Edited By : Manjunath H D
Kshetra Samachara

Kshetra Samachara

19/09/2022 08:08 pm

Cinque Terre

4.78 K

Cinque Terre

0

ಸಂಬಂಧಿತ ಸುದ್ದಿ