ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವೆಂಕಟರಮಣ ದೇವಳದಲ್ಲಿ ಅನಂತ ಚತುರ್ದಶಿ ಆಚರಣೆ

ಮಂಗಳೂರು: ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 'ಅನಂತ ಚತುರ್ದಶಿ' ( ನೋಪಿ ) ಪ್ರಯುಕ್ತ ಶ್ರೀ ದೇವರಿಗೆ ವಿಶೇಷ ಅನಂತ ದೇವರ ಅಲಂಕಾರಗೊಳಿಸಿ ಮಹಾ ಪೂಜೆ ನೆರವೇರಿತು.

ರಾತ್ರಿ ಪೂಜೆಗೆ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಶ್ರೀ ದೇವರಿಗೆ ರಾತ್ರಿ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ, ಕಿರಣ್ ಪೈ, ಸತೀಶ್ ಪ್ರಭು, ಗಣೇಶ್ ಕಾಮತ್, ಜಗನ್ನಾಥ್ ಕಾಮತ್ ಹಾಗೂ ಸಾವಿರಾರು ಭಜಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶ್ರೀ ಕಾಶೀ ಮಠದಲ್ಲಿ ಶ್ರೀಗಳವರ ದಿವ್ಯ ಹಸ್ತಗಳಿಂದ ಶ್ರೀ ಅನಂತ ವ್ರತ ಆಚರಣೆ ನಡೆಯಿತು.

Edited By : Vijay Kumar
Kshetra Samachara

Kshetra Samachara

09/09/2022 07:58 pm

Cinque Terre

2.68 K

Cinque Terre

0