ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಜ್ರಂಭಣೆಯ ಅನಂತ ವೃತ

ಮುಲ್ಕಿ: ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಜಭಣೆಯ ಅನಂತ ವೃತ ನೋಂಪಿ ಉತ್ಸವವು ವಿಜೃಂಭಣೆಯಿಂದ ನಡೆಯಿತು.

ಮುಂಜಾನೆ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಶ್ರೀ ದೇವರ ಸಂಪುಷ್ಟ ಸಹಿತ ಸ್ವರ್ಣ ಕಲಶವನ್ನು ವಿವಿಧ ವಾದ್ಯಗೋಷ್ಠಿಯ ಯಲ್ಲಿ ಪಲ್ಲಕಿಯಲ್ಲಿ ಶಾಂಭವೀ ನದಿ ತೀರಕ್ಕೆ ತರಲಾಯಿತು.

ಭಕ್ತ ವೃಂದದ ಸಹಿತವಾಗಿ ಪವಿತ್ರ ನದಿ ಸ್ನಾನದ ಬಳಿಕ ಕಲಶ ಅರ್ಚನೆ, ಗಂಗಾಭಾಗೀರಥಿ ಅರ್ಚನೆ ಬಳಿಕ ವಿವಿಧ ಪುಷ್ಪ ಹಾಗೂ ಪತ್ರೆಗಳ ಸಹಿತ ಅರ್ಚನೆ ನಡೆದು ಕಲಶ ತುಂಬಿಸಿ ಪೂಜೆಯ ಬಳಿಕ ಶ್ರೀದೇವಳಕ್ಕೆ ತಂದು ಕಲಶ ಪ್ರತಿಷ್ಠಾಪಿಸಲಾಯಿತು.

ಶ್ರೀ ಕ್ಷೇತ್ರದ ಅರ್ಚಕ ವೇಮೂ ವೆಂಕಟೇಶ ಭಟ್ ಪೂಜಾ ವಿಧಿ ವಿಧಾನಗಳನ್ನು ನಡೆಸಿದರು. ವೇ.ಮೂ.ಪದ್ಮನಾಭ ಭಟ್ ಅರ್ಚನಾ ಶ್ಲೋಕ ಪಠಣ ನಡೆಸಿದರು.

ಈ ಸಂದರ್ಭ ಶ್ರೀ ವ್ಯಾಸಮಹರ್ಷಿ ವೇದ ಪಾಠ ಶಾಲೆಯ ವಿದ್ಯಾರ್ಥಿಗಳು ಅರ್ಚಕವ್ರಂದ, ದೇವಸ್ಥಾನದ ಆಡಳಿತ ಮೊಕ್ತೇಸರರು ,ಭಜಕ ವೃಂದ ಹಾಜರಿದ್ದರು.

Edited By :
Kshetra Samachara

Kshetra Samachara

09/09/2022 05:30 pm

Cinque Terre

19.82 K

Cinque Terre

1

ಸಂಬಂಧಿತ ಸುದ್ದಿ