ಮಲ್ಪೆ: ಸಣ್ಣ ಮೀನುಗಾರಿಕೆ ದೋಣಿಯೊಂದು ಮಗುಚಿ ಅದರಲ್ಲಿದ್ದ ಓರ್ವ ಬಾಲಕ ನೀರುಪಾಲಾಗಿ ಮೂರು ದಿನ ಕಳೆದರೂ ಬಾಲಕನ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಮೂಲತಃ ಉತ್ತರ ಕನ್ನಡದ ಮೂವರು ಮೀನುಗಾರರು ಸಣ್ಣ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ದೋಣಿ ಮಗುಚಿಬಿದ್ದ ಪರಿಣಾಮ ಮೂವರು ನೀರಿಗೆ ಬಿದ್ದಿದ್ದು ಇಬ್ಬರು ಈಜಿ ಬಚಾವಾಗಿದ್ದಾರೆ.
ದೋಣಿಯಲ್ಲಿದ್ದ ರಾಮಕೃಷ್ಣ ಎಂಬುವರ ಮಗ ನಾಗರಾಜ ( 16) ಎಂಬ ಬಾಲಕ ಈಜಲಾಗದೆ ನೀರು ಪಾಲಾಗಿದ್ದ. ಕಳೆದ ಮೂರು ದಿನಗಳಿಂದ ಹುಡುಕಾಟ ನಡೆಸಿದ್ರೂ ಬಾಲಕನ ಮೃತದೇಹ ಪತ್ತೆಯಾಗಿಲ್ಲ. ಮಲ್ಪೆಯ ಆಪತ್ಬಾಂಧವ ಈಶ್ವರ್ ಮಲ್ಪೆ ಉತ್ತರ ಕನ್ನಡಕ್ಕೆ ತೆರಳಿ ತೀವ್ರ ಶೋಧ ನಡೆಸಿದ್ದಾರೆ. ಈಶ್ವರ್ 70 ಅಡಿ ಆಳಕ್ಕೆ ಧುಮುಕಿ ನೋಡಿದರೂ ಪ್ರಯೋಜನವಾಗಲಿಲ್ಲ. ಈ ಮಧ್ಯೆ ಸರಕಾರದ ಕಡೆಯಿಂದ ನಮಗೆ ನಿರೀಕ್ಷಿತ ನೆರವು ಸಿಕ್ಕಿಲ್ಲ. ನಮಗೆ ಗಣೇಶ ಚತುರ್ಥಿ ಹಬ್ಬವನ್ನೂ ಮಾಡಲಾಗಲಿಲ್ಲ ಎಂದು ಮೀನುಗಾರರು ತಮ್ಮ ನೋವು ತೋಡಿಕೊಂಡಿದ್ದಾರೆ.
Kshetra Samachara
01/09/2022 05:48 pm