This is a modal window.
Beginning of dialog window. Escape will cancel and close the window.
End of dialog window.
ಬೈಂದೂರು: ಶುದ್ಧ ಮನಸ್ಸಿನ, ಸಂಕಲ್ಪ ಪಾರ್ಥನೆ ರೂಪದಲ್ಲಿ ಶ್ರೀ ದೇವರ ಸಾನಿಧ್ಯದಲ್ಲಿ ಪ್ರಾರ್ಥಿಸಿದರೆ ಭಕ್ತರ ಮನೋಕಾಂಕ್ಷೆ ಈಡೇರುತ್ತದೆ. ನೆನೆದ ಕಾರ್ಯ ಸಿದ್ಧಿಯಾಗುತ್ತದೆ. ವಿಜಯೀ ಗಣಪತಿ ಎನ್ನುವ ಖ್ಯಾತಿಗೆ ಪಾತ್ರವಾದ ದೇವಸ್ಥಾನ ಕುಂದಾಪುರ ತಾಲೂಕು ಗೋಳಿಹೊಳೆಯ ಬೆಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ಇಂದು ಗಣೇಶೋತ್ಸವ ಸಂಭ್ರಮದಿಂದ ನಡೆಯಿತು.
ಹೆಸರೇ ಸೂಚಿಸುವಂತೆ ಇಲ್ಲಿನ ಗಣಪತಿ ವಿಗ್ರಹ ಶುದ್ಧ ಬಿಳಿಶಿಲೆ ಅಥವಾ ಅಮೃತಶಿಲೆಯಿಂದ ನಿರ್ಮಿಸಲ್ಪಟ್ಟಿದ್ದು, ರಾಜ್ಯದ ಏಕೈಕ ಬಿಳಿಶಿಲೆಯ ಆಕರ್ಷಣೀಯ ಗಣಪತಿ ದೇವಸ್ಥಾನವಾಗಿದೆ. ತೀರಾ ಗ್ರಾಮೀಣ ಪ್ರದೇಶದಲ್ಲಿರುವ ಈ ದೇವಸ್ಥಾನ ಗಣಪತಿಯ ಕಾರಣಿಕ ಪ್ರಸಿದ್ಧಿಯಿಂದಲೇ ಭಕ್ತ ಸಂದೋಹವನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಕುಂದಾಪುರ ತಾಲೂಕಿನ ಒಂದು ಮೂಲೆಯಲ್ಲಿರುವ ಗೋಳಿಹೊಳೆ ಗಾಮ ಹಲವಾರು ಭೌತಿಕ ವಿಶೇಷತೆ ಒಳಗೊಂಡ ಊರು. ಅವುಗಳಲ್ಲಿ ಮುಖ್ಯವಾದುದು ಈ ಬಿಳಿ ಶಿಲೆಯ ವಿನಾಯಕ ದೇವಸ್ಥಾನ. ಋಷಿಮುನಿಗಳಿಂದ ಸ್ಥಾಪಿತವಾದ ಈ ಕ್ಷೇತ್ರ ಕಾರ್ಯ ವಿಜಯದ ಸಂಕೇತ. ಭಕ್ತರ ಮನೋಸಂಕಲ್ಪಗಳಿಗೆ ಕ್ಷೇತ್ರದಿಂದ ವಿಜಯತ್ವ ದೊರಕುತ್ತದೆ ಎನ್ನುವ ಪ್ರತೀತಿ ಭಕ್ತವಲಯದಲ್ಲಿ ದಟ್ಟವಾಗಿದೆ.
ಗತಕಾಲದಲ್ಲಿ ಋಷಿಮುನಿಗಳು ಬಿಳಿಶಿಲೆ ಗಣಪತಿ ವಿಗ್ರಹವನ್ನು ಪೂಜಿಸುತ್ತಿದ್ದರು. ನಂತರ ರಾಜವಂಶಸ್ಥರು ಈ ಬಿಳಿಶಿಲೆ ಗಣಪತಿಯನ್ನು ಆರಾಧಿಸಲು ಆರಂಭಿಸಿದರು. ನಂತರ ಬ್ರಿಟಿಷರಿಂದಲೂ ಮುಂದುವರೆದು ಈಗ ಜೀರ್ಣೋದ್ಧಾರವಾಗಿ ಗ್ರಾಮದ ಕಾರಣಿಕ ಕ್ಷೇತ್ರವಾಗಿದೆ. ಇಲ್ಲಿ ಪ್ರತೀ ವರ್ಷ ಗಣೇಶೋತ್ಸವ ಹಾಗೂ ನವರಾತ್ರಿ ಉತ್ಸವ ಸಂಭ್ರಮದಿಂದ ನಡೆಯುತ್ತವೆ.
- ಜಯಶೇಖರ್ ಮಡಪ್ಪಾಡಿ, ಪಬ್ಲಿಕ್ ನೆಕ್ಸ್ಟ್ ಕುಂದಾಪುರ
Kshetra Samachara
01/09/2022 09:44 am