ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ವಿಜೃಂಭಣೆಯ ಗಣೇಶೋತ್ಸವಕ್ಕೆ ಚಾಲನೆ

ಮುಲ್ಕಿ: ಮುಲ್ಕಿ ಪರಿಸರದ ಅನೇಕ ಕಡೆಗಳಲ್ಲಿ ಗಣೇಶೋತ್ಸವ ವಿಜೃಂಭಣೆಯಿಂದ ನಡೆದಿದೆ.

ಮುಲ್ಕಿ ಒಂಬತ್ತು ಮಾಗಣೆಯ ಇತಿಹಾಸ ಪ್ರಸಿದ್ಧ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಎದುರು ಭಾಗದಲ್ಲಿ 47ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ವಿಜೃಂಭಣೆಯಿಂದ ನಡೆದಿದ್ದು ವೇ.ಮೂ ಕೃಷ್ಣರಾಜ ಭಟ್ ಬಪ್ಪನಾಡು ನೇತೃತ್ವದಲ್ಲಿ ಗಣಪತಿ ವಿಗ್ರಹ ಪ್ರತಿಷ್ಠೆಯಾಗಿ ವಿಶೇಷ ಪೂಜೆಗಳು ನಡೆದವು.

ಅದರಂತೆ ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನ, ವೀರ ಮಾರುತಿ ದೇವಸ್ಥಾನ, ಕೆಎಸ್ ರಾವ್ ನಗರ ಕಿನ್ನಿಗೋಳಿ ಹಳೆಯಂಗಡಿ, ಪಕ್ಷಿಕೆರೆ, ಐಕಳ ಪೆರ್ಗುಂಡಿ, ಬಳಕುಂಜೆ, ಕಿನ್ನಿಗೋಳಿ ರಾಜರತ್ನಾಪುರ ಮತ್ತಿತರ ಕಡೆಗಳಲ್ಲಿ ಗಣಪತಿ ವಿಗ್ರಹ ಪ್ರತಿಷ್ಠಾಪನೆಯಾಗಿದ್ದು ವಿಶೇಷ ಪೂಜೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

48ನೇ ವರ್ಷದ ಸಾರ್ವಜನಿಕ ಗಣೇಶೋತ್ಸವಕ್ಕೆ ಕಿನ್ನಿಗೋಳಿ ಸಜ್ಜಾಗಿದ್ದು ವಿದ್ಯುತ್ ದೀಪಾಲಂಕೃತಗೊಂಡು ಸುಂದರವಾಗಿ ಕಂಗೊಳಿಸುತ್ತಿದೆ. ಗಣೇಶೋತ್ಸವದ ಪ್ರಯುಕ್ತ ಈ ಬಾರಿ ಕಬ್ಬು, ಹೂವು, ಹಣ್ಣು, ತರಕಾರಿ ವ್ಯಾಪಾರ ಭರ್ಜರಿಯಾಗಿ ನಡೆದಿದ್ದು ವ್ಯಾಪಾರಸ್ಥರು ಫುಲ್ ಖುಷ್ ಆಗಿದ್ದಾರೆ.

Edited By : Shivu K
Kshetra Samachara

Kshetra Samachara

31/08/2022 02:22 pm

Cinque Terre

3.69 K

Cinque Terre

1

ಸಂಬಂಧಿತ ಸುದ್ದಿ