ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸಂಘನಿಕೇತನ ಗಣೇಶನಿಗೆ ಅಮೃತ ಮಹೋತ್ಸವ ಸಂಭ್ರಮ

ಮಂಗಳೂರು: ನಗರದ ಮಣ್ಣಗುಡ್ಡೆಯಲ್ಲಿರುವ ಸಂಘನಿಕೇತನದಲ್ಲಿ ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ ಈ ಬಾರಿ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಅಮೃತ ಮಹೋತ್ಸವ ಸಂಭ್ರಮ (75 ವರ್ಷ). ಈ ಪ್ರಯುಕ್ತ ಶ್ರೀ ಮಹಾಗಣಪತಿ ದೇವರ ಮೃತಿಕಾ ವಿಗ್ರಹವನ್ನು ವಿಜೃಂಭಣೆಯಿಂದ ತರಲಾಯಿತು.

ಆಗಷ್ಟ್‌ 31ರಿಂದ ಸೆಪ್ಟೆಂಬರ್‌ 4ರವರೆಗೆ ಗಣೇಶೋತ್ಸವ ನಡೆಯಲಿದೆ. ಸಾರ್ವಜನಿಕ ಗಣೇಶೋತ್ಸವದ ಉದ್ಘಾಟನೆ ಶ್ರೀ ಮುಕುಂದ್ ಮಾನನೀಯ ಸಹಸರ ಕಾರ್ಯವಾಹ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇವರ ದಿವ್ಯ ಹಸ್ತಗಳಿಂದ ನೆರವೇರಲಿದೆ. ವಿವಿಧ ಧಾರ್ಮಿಕ, ಸಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ .ಸತೀಶ್ ಪ್ರಭು, ಸುರೇಶ ಕಾಮತ್, ಉಪಾಧ್ಯಕ್ಷ ಜೆ.ಕೆ ರಾವ್ ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

31/08/2022 10:42 am

Cinque Terre

9.79 K

Cinque Terre

0

ಸಂಬಂಧಿತ ಸುದ್ದಿ