ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸೋಮವಾರ ತೆನೆಹಬ್ಬ ನಡೆಯಿತು. ಭಾದ್ರಪದಮಾಸದ ಹಸ್ತಾನಕ್ಷತ್ರ ಶ್ರೀಕ್ಷೇತ್ರಕಟೀಲಿನಲ್ಲಿ ತೆನೆ ಹಬ್ಬ ಕೊರಳುಹಬ್ಬ, ಕದಿರುಕಟ್ಟುವುದು.
ಒಂದು ವೇಳೆ ಈ ದಿನ ಮಂಗಳವಾರ ಅಥವಾ ಶನಿವಾರ ಬಂದಲ್ಲಿ ಅದರ ಹಿಂದಿನ ದಿನ ಉತ್ತರಾನಕ್ಷತ್ರದಲ್ಲಿ ಈ ಹಬ್ಬವನ್ನು ಆಚರಿಸಬೇಕು. ಆದ್ದರಿಂದ ಈ ವರ್ಷ ಉತ್ತರಾ ನಕ್ಷತ್ರ ಇಂದು ಕಟೀಲು ದೇಗುಲದಲ್ಲಿ ಮಧ್ಯಾಹ್ನ ನವಾನ್ನ ಭೋಜನ.ಹೊಸತು ಊಟಮಾಡುವುದು
ಅರ್ಚಕರು ತೆನೆಗಳನ್ನು ಪೂಜಿಸಿ ದೇವರ ಎದುರು ಕೊಂಡೊಯ್ದು ಅಲ್ಲಿ ಆರತಿ ಬೆಳಗಿ ಬಳಿಕೆ ತೆನೆಗಳನ್ನು ಕಟ್ಟಲಾಯಿತು. ಭಕ್ತರಿಗೆ ವಿತರಿಸಲಾಯಿತು. ಈ ಸಂದರ್ಭ ಕ್ಷೇತ್ರದ ಅರ್ಚಕರು, ಆಡಳಿತ ಸಿಬ್ಬಂದಿ ಭಕ್ತಾದಿಗಳು ಉಪಸ್ಥಿತರಿದ್ದರು.
Kshetra Samachara
29/08/2022 11:22 am