ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ : ಭಕ್ತಿ ಭಾವದ ತುಡರ ಬಲಿ ಉತ್ಸವ; ಮುಷ್ಠಿ ಕಾಣಿಕೆ ಸಮರ್ಪಣೆ

ತಕ್ಕಣಪಾದೆ: ಸಮೀಪದ ಶಿಮಂತೂರು ಮತ್ತು ಎಳತ್ತೂರು ಗ್ರಾಮಸ್ಥರ ರಾಜನ್ ದೈವ ಶ್ರೀ ಧರ್ಮ ಜಾರಂದಾಯ ದೈವಸ್ಥಾನ ತಕ್ಕಣಪಾದೆಯ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ತುಡರ ಬಲಿ ಹಾಗೂ ಮುಷ್ಟಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಶಿಮಂತೂರು ಮಜಲಗುತ್ತು ಧರ್ಮಚಾವಡಿಯಿಂದ ಭಂಡಾರ ಹೊರಟು ತಕ್ಕಣ ಪಾದೆ ದೈವಸ್ಥಾನದಲ್ಲಿ ವಿಷ್ಣುಮೂರ್ತಿ ಭಟ್ ಶಿಮಂತೂರು ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಮುಷ್ಟಿ ಕಾಣಿಕೆ ನಡೆದು ತುಡ ರಬಲಿಯು ವಿಜೃಂಭಣೆಯಿಂದ ಜರುಗಿದೆ.

ಈ ಸಂದರ್ಭ ಎಳತ್ತೂರು ಗುತ್ತು ಗುತ್ತಿನಾರ್ ಬಾಲಕೃಷ್ಣ ಯಾನೆ ಶಂಕರ್ ರೈ, ಬಾಬಾರಂಜನ್ ಶೆಟ್ಟಿ ಮಜಲ ಗುತ್ತು, ರಾಮದಾಸ ಶೆಟ್ಟಿ ಬಾಳಿಕೆ ಮನೆ, ಏಳು ಗುತ್ತಿನ ಮನೆತನದವರು, ನಾಲ್ಕು ಬರ್ಕೆ ಮನೆತನದವರು, ಶಿಮಂತೂರು ಎಳತ್ತೂರು ಗ್ರಾಮದ ಭಕ್ತಾದಿಗಳು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

25/08/2022 11:08 am

Cinque Terre

10.52 K

Cinque Terre

1